ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಸಂಸದನ್ನು ವಿಮಾನದಲ್ಲಿ ಪ್ರವಾಸ ಮಾಡದಂತೆ ನಿಷೇಧಿಸಲು ಹೇಗೆ ಸಾದ್ಯವೆಂದು ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದಾರೆ.

ನವದೆಹಲಿ (ಮಾ.27): ಏರ್ ಇಂಡಿಯಾ ಅಧಿಕಾರಿ ಮೇಲೆ ಸಂಸದ ರವೀಂದ್ರ ಗಾಯಕ್ವಾಡ್ ಹಲ್ಲೆ ಪ್ರಕರಣವು ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ.

ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಸಂಸದನ್ನು ವಿಮಾನದಲ್ಲಿ ಪ್ರವಾಸ ಮಾಡದಂತೆ ನಿಷೇಧಿಸಲು ಹೇಗೆ ಸಾದ್ಯವೆಂದು ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದಾರೆ.

ವ್ಯಕ್ತಿಯು ತಪ್ಪತಸ್ಥನೆಂದು ಸಾಬೀತಾಗುವ ಮುಂಚೆಯೇ ಆತನ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಲೋಕಸಭೆಯಲ್ಲಿ, ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಕೂಡಾ ಆ ಕುರಿತು ಚರ್ಚಿಸಲು ನೋಟಿಸ್ ಕೊಟ್ಟಿದ್ದಾರೆ.

ಗಾಯಕ್ವಾಡ್ ಪ್ರಕರಣದಲ್ಲಿ ಏರ್ ಇಂಡಿಯಾ ಸಿಬ್ಬಂದಿಯು ಕೂಡಾ ಅದೇ ರಿತಿ ವರ್ತಿಸಿದ್ದಾರೆ, ಎಂದು ಅವರು ಏಎನ್ಐ’ಗೆ ಹೇಳಿದ್ದಾರೆ.

ಕಾಮಗ್ರೆಸ್’ನ ಇನ್ನೋರ್ವಾ ಮುಖಂಡ ಹುಸೇನ್ ದಳ್ವಾಯಿ ಕೂಡಾ ಅದೇ ರಿತಿಯ ಻ಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಗಾಯಕ್ವಾಡ್ ಓರ್ವ ಪ್ರಮುಖ ನಾಯಕ. ಪ್ರಕರಣವು ಏಕ-ಮುಖವಲ್ಲ, ಅವರೊಂದಿಗೆ ಏರ್ ಇಂಡಿಯಾ ಸಿಬ್ಬಂದಿಯು ಕೂಡಾ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದಳ್ವಾಯಿ ಹೇಳಿದ್ದಾರೆ.

ಸಂಸದನನ್ನು ವಿಮಾನ ಪ್ರಯಾಣದಿಂದ ನಿಷೇಧಿಸಿರುವ ರ್ ಇಂಡಿಯಾ ಕ್ರಮದ ವಿರುದ್ಧ ಶಿವಸೇನೆಯು ಸಂಸತ್ತಿನಲ್ಲಿ ಹಕ್ಕುಚ್ಯುತಿ ಮಂಡಿಸಲು ತಯಾರಿ ನಡೆಸಿದೆ. ಶಿವಸೇನೆಯು ಏರ್ ಇಂಡಿಯಾ ಕ್ರಮವನ್ನು ಖಂಡಿಸಿ ಉಸ್ಮಾನಬಾದ್ ಬಂದ್’ಗೆ ಕರೆಯನ್ನೂ ನೀಡಿದೆ.

56 ವರ್ಷ ಪ್ರಾಯದ ಉಸ್ಮಾನಬಾದ್ ಸಂಸದ ರವೀಂದ್ರ ಗಾಯಕ್ವಾಡ್ ಕಳೆದ ವಾರ ಏರ್ ಇಂಡಿಯಾ ಅಧಿಕಾರಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಬಳಿಕ ಏರ್ ಇಂಡಿಯಾ ಸೇರಿದಂತೆ ಏಳು ವಿಮಾನಯಾನ ಸಂಸ್ಥೆಗಳು ಗಾಯಕ್ವಾಡ್’ಗೆ ನಿಷೇಧ ಹೇರಿದ್ದವು.