ತೀವ್ರ ಚರ್ಚೆಗೆ ಗ್ರಾಸವಾಗಿರುವ ತ್ರಿವಳಿ ತಲಾಖ್​​ ಮಸೂದೆ ಇಂದು ಸಂಸತ್​​ನಲ್ಲಿ ಮಂಡನೆಯಾಗಲಿದೆ. ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಮಂಡಿಸಲಿದೆ.

ನವದೆಹಲಿ (ಡಿ.28): ತೀವ್ರ ಚರ್ಚೆಗೆ ಗ್ರಾಸವಾಗಿರುವ ತ್ರಿವಳಿ ತಲಾಖ್​​ ಮಸೂದೆ ಇಂದು ಸಂಸತ್​​ನಲ್ಲಿ ಮಂಡನೆಯಾಗಲಿದೆ. ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಮಂಡಿಸಲಿದೆ.

ಮುಸ್ಲಿಂ ಪುರುಷ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡುವುದನ್ನು ಅಪರಾಧ ಎಂದು ಪರಿಗಣಿಸುವ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ 2017 ಅನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಮಂಡಿಸಲಿದ್ದಾರೆ. ಮಸೂದೆಯಲ್ಲಿಯ ಕೆಲವು ಅಂಶಗಳ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್‌ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಸಂವಿಧಾನ ಮತ್ತು ಕುರಾನ್​​​ಗೆ ವಿರುದ್ಧವಾಗಿದ್ದರೆ ತ್ರಿವಳಿ ತಲಾಖ್ ನಿಷೇಧದ ಮಸೂದೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ಮದುವೆ ಎಂಬುದು ಒಂದು ಒಪ್ಪಂದ. ಯಾರೇ ಆ ಒಪ್ಪಂದವನ್ನು ಮುರಿದರೂ ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ಮಂಡಿಸಲಿರುವ ಮಸೂದೆಯು ಸಂವಿಧಾನ ಮತ್ತು ಕುರಾನ್​​​​ಗೆ ಬದ್ಧವಾಗಿ ಇರದಿದ್ದರೆ ಯಾವ ಮುಸ್ಲಿಂ ಮಹಿಳೆಯೂ ಅದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಮಂಡಳಿ ಹೇಳಿದೆ.