ರಾಜಸ್ಥಾನದ ಜಲಾವರ್ ಪ್ರಾಂತ್ಯದ ಬಕಾನಿಯ ಥೋಬಾರಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಐದು ಗಂಡು ಮಕ್ಕಳನ್ನು ಹೊಂದಿರುವ ದಂಪತಿ, ತಮಗಾದ ಮತ್ತೊಂದು ಮಗು, ಹೆಣ್ಣು ಎಂಬ ಕಾರಣಕ್ಕೆ, 6 ದಿನಗಳ ಆ ನವಜಾತ ಶಿಶುವಿನ ಮೇಲೆ ಕಲ್ಲು ಇರಿಸಿ ಸಾಯಲು ಬಿಟ್ಟ ಘಟನೆ ನಡೆದಿದೆ.
ರಾಜಸ್ಥಾನದ ಜಲಾವರ್ ಪ್ರಾಂತ್ಯದ ಬಕಾನಿಯ ಥೋಬಾರಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೀರಂ ಲಾಲ್ (40) ಮತ್ತು ಸೋರಂ ಬಾಯಿ (35) ದಂಪತಿ ಈಗಾಗಲೇ ಒಂದು ಹೆಣ್ಣು, ಐದು ಗಂಡು ಮಕ್ಕಳನ್ನು ಹೊಂದಿದ್ದರೂ, ಮತ್ತೊಂದು ಗಂಡು ಮಗು ಬಯಸಿದ್ದರು. ಆದರೆ 7ನೇ ಮಗು ಹೆಣ್ಣಾಯ್ತು. ಹೀಗಾಗಿ ದಂಪತಿ ಮಗುವನ್ನು ಪ್ರದೇಶವೊಂದರಲ್ಲಿ ಬಚ್ಚಿಟ್ಟು, ಅದರ ಮೇಲೆ ಕಲ್ಲು ಇರಿಸುತ್ತಿದ್ದರು. ಇದನ್ನು ನೋಡಿದ ಬಾಲಕ ಜನರಿಗೆ ಮಾಹಿತಿ ನೀಡಿದ. ಅವರು ಬರುವ ವೇಳೆಗೆ ಮಗು ಸಾವನ್ನಪ್ಪಿತ್ತು.
