Asianet Suvarna News Asianet Suvarna News

ಈ ಶಾಲೆಗೆ ಪೋಷಕರೇ ಮಾಲಿಕರು; ಫೀಸು ನಿರ್ಧರಿಸುವವರು ಇವರೇ!

ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ ಭೀತಿ ನಗರಗಳಲ್ಲಿ ಸಾಮಾನ್ಯ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶುಲ್ಕವನ್ನು ಭರಿಸಿ ಮಕ್ಕಳನ್ನು ಓದಿಸುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಸವಾಲಾಗಿರುವ ಇಂದಿನ ದಿನಗಳಲ್ಲಿ
ಪೋಷಕರೇ ಒಂದು ಕಡೆ ಸೇರಿ ಶಾಲೆಗಳನ್ನು ಸ್ಥಾಪಿಸಿ, ತಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಬೇಕು ಎನ್ನುವುದನ್ನು ನಿರ್ಧಾರ ಮಾಡಿಕೊಂಡು ಶಾಲೆಗಳನ್ನು ಮುನ್ನಡೆಸುವ ಹೊಸ ಪದ್ಧತಿ ಈಗ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಅಂತಹ
ಎರಡು ಶಾಲೆಗಳು ಒಂದು ಅದ್ವಾಯ ಶಾಲೆ ಮತ್ತೊಂದು ಸಿಟಿಜನ್ಸ್ ಗುರುಕುಲ.

Parents Are Owner to this School

ಬೆಂಗಳೂರು (ಫೆ.12):  ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ ಭೀತಿ ನಗರಗಳಲ್ಲಿ ಸಾಮಾನ್ಯ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶುಲ್ಕವನ್ನು ಭರಿಸಿ ಮಕ್ಕಳನ್ನು ಓದಿಸುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಸವಾಲಾಗಿರುವ ಇಂದಿನ ದಿನಗಳಲ್ಲಿ
ಪೋಷಕರೇ ಒಂದು ಕಡೆ ಸೇರಿ ಶಾಲೆಗಳನ್ನು ಸ್ಥಾಪಿಸಿ, ತಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಬೇಕು ಎನ್ನುವುದನ್ನು ನಿರ್ಧಾರ ಮಾಡಿಕೊಂಡು ಶಾಲೆಗಳನ್ನು ಮುನ್ನಡೆಸುವ ಹೊಸ ಪದ್ಧತಿ ಈಗ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಅಂತಹ
ಎರಡು ಶಾಲೆಗಳು ಒಂದು ಅದ್ವಾಯ ಶಾಲೆ ಮತ್ತೊಂದು ಸಿಟಿಜನ್ಸ್ ಗುರುಕುಲ.
ಮಕ್ಕಳಿಗೆ ವಿಶ್ವಮಟ್ಟದ ‘ಸ್ಟೈನರ್ ವಾಲ್ಡೋರ್ಫ್ ಫಿಲಾಸಫಿ’ (Steiner Waldorf Philosophy) ಆಧಾರಿತ ಶಿಕ್ಷಣ ನೀಡುವ ಉದ್ದೇಶದಿಂದಲೂ ಕೆಲವೆಡೆ ಪೋಷಕರೇ ನಡೆಸುವ ಶಾಲೆ ಅಸ್ತಿತ್ವಕ್ಕೆ ಬಂದಿದೆ. ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸದೇ ‘ನೋ ಪ್ರಾಫಿಟ್ ನೋ ಲಾಸ್’ ತತ್ವದಡಿ ಎಲ್ಲ ಖರ್ಚನ್ನೂ ಸಮಾನವಾಗಿ ಹಂಚಿಕೊಂಡು ನಡೆಸುವ ಎರಡು ಶಾಲೆಗಳ ಡೀಟೈಲ್ಸ್ ಇಲ್ಲಿದೆ.
1. ಅದ್ವಾಯ ಶಾಲೆ
ಎರಡೂವರೆ ವರ್ಷಗಳ ಹಿಂದೆ ‘ಸ್ಟೈನರ್ ವಲ್ಡೋರ್ಫ್ ಫಿಲಾಸಫಿಯಿಂದ ಪ್ರೇರಿತಗೊಂಡ ಪೋಷಕರಿಂದ ಶುರುವಾದದ್ದು ಬೆಂಗಳೂರಿನ ಕಸ್ತೂರಿ ನಗರದ ಅದ್ವಾಯ ಶಾಲೆ. ಇಲ್ಲಿ ಮಗುವಿನ ಪ್ರತಿ ಕಲಿಕೆಯೂ ಪ್ರಯೋಗಿಕವಾಗಿಯೇ
ಇರುತ್ತೆ. ಮಕ್ಕಳು ಪ್ರತಿ ಅಕ್ಷರ, ಪದವನ್ನು ಸ್ಪರ್ಶಿಸಿ, ಕೇಳಿ, ನೋಡಿ ಕಲಿಯುತ್ತಾರೆ. ಮಗುವಿನ ಕಲ್ಪನೆ ಹೆಚ್ಚಿಸುವ ಚಟುವಟಿಕೆ, ಬೌದ್ಧಿಕ, ಪ್ರಾಯೋಗಿಕ ಹಾಗೂ ಕಲಾತ್ಮಕ ಕಲಿಕೆಯೇ ಇಲ್ಲಿ ಪ್ರಧಾನ. ಈ ಶಾಲೆಗೆ ಪೋಷಕರೇ ಮಾಲೀಕರು ಇಲ್ಲಿ ಮಗುವಿನ ಪ್ರತಿ ಕಲಿಕೆಯೂ ಪ್ರಯೋಗಿಕವಾಗಿಯೇ ಇರುತ್ತೆ. ಮಕ್ಕಳು ಪ್ರತಿ ಅಕ್ಷರ, ಪದವನ್ನು ಸ್ಪರ್ಶಿಸಿ, ಕೇಳಿ, ನೋಡಿ ಕಲಿಯುತ್ತಾರೆ. ಮಗುವಿನ ಕಲ್ಪನೆ ಹೆಚ್ಚಿಸುವ  ಚಟುವಟಿಕೆ, ಬೌದ್ಧಿಕ, ಪ್ರಾಯೋಗಿಕ ಹಾಗೂ ಕಲಾತ್ಮಕ ಕಲಿಕೆಯೇ ಇಲ್ಲಿ ಪ್ರಧಾನ. ‘ಹತ್ತಿರದಲ್ಲೆಲ್ಲೂ ಈ ರೀತಿಯ ಶಿಕ್ಷಣ ಕೊಡುವ ಶಾಲೆ ಇರಲಿಲ್ಲ. ನಮಗೆ ಬೇರೆ ಶಾಲೆಗೆ ಮಕ್ಕಳನ್ನು ಕಳಿಸುವ ಮನಸ್ಸಿರಲಿಲ್ಲ. ಹಾಗಾಗಿ ಒಂದಿಷ್ಟು ಜನ  ಸಮಾನಾಸಕ್ತ ಪೋಷಕರು ಸೇರಿ ಟ್ರಸ್ಟ್ ಮಾಡಿಕೊಂಡೆವು. ಅದರ ಮೂಲಕ ಈ
ಅದ್ವಾಯ ಶಾಲೆ ಆರಂಭವಾಯಿತು’ ಎನ್ನುತ್ತಾರೆ ಪೋಷಕಿ ಹಾಗೂ ಈ ಶಾಲೆಯ ಟ್ರಸ್ಟಿ ಶಿಬಾಲಿ. ಸರ್ಜಾಪುರ ರಸ್ತೆಯಲ್ಲಿರುವ ಪ್ರಕೃತಿ ಎಂಬ ಸ್ಟೈನರ್ ಶಾಲೆಯಲ್ಲಿ   ಕಿಂಡರ್‌ಗಾರ್ಡನ್‌ವರೆಗೆ ಕಲಿತ ಮಕ್ಕಳು 1 ನೇ ಕ್ಲಾಸ್‌ಗೆ ಅದ್ವಾಯ ಶಾಲೆಗೆ
ಬರುತ್ತಾರೆ.
ಇಲ್ಲೀಗ ಗ್ರೇಡ್ 1, 2 ಕ್ಲಾಸ್‌ಗಳಿವೆ. ಒಟ್ಟು 30 ಜನ ಮಕ್ಕಳಿದ್ದಾರೆ. ಮಕ್ಕಳಿಗೆ ಆಟಗಳ ಮೂಲಕ ಪಾಠ ಹೇಳಲಾಗುತ್ತದೆ. ಆರೂವರೆ ವರ್ಷಕ್ಕೆ ಒಂದನೇ ಕ್ಲಾಸ್'ಗೆ ಸೇರಿಸಿದರೆ ಅಲ್ಲಿಂದಲೇ ಪರಿಸರದ ಮೂಲಕ ಶಿಕ್ಷಣ ನೀಡಲಾಗುತ್ತದೆ. ಇದರಿಂದ ಮಕ್ಕಳ ಗೃಹಿಕೆಯೂ ಬಲವಾಗುತ್ತದೆ, ಕಲಿತದ್ದು ನೆನಪಿನಲ್ಲುಳಿಯುತ್ತದೆ. ಇದರ ಜೊತೆಗೆ ಕ್ರಾಫ್ಟ್, ನೃತ್ಯಕ್ಕೆ ಇಲ್ಲಿ ಪ್ರಾಶಸ್ತ್ಯವಿದೆ. ಆರನೇ ಕ್ಲಾಸ್'ವರೆಗೂ ಇದೇ ಮಾದರಿಯ ಶಿಕ್ಷಣ ನೀಡಿ, ಏಳನೇ ಕ್ಲಾಸ್‌ನಲ್ಲಿ ಚಾಲ್ತಿಯಲ್ಲಿರುವ  ಸಿಬಿಎಸ್‌ಸಿ, ಐಸಿಎಸ್‌ಸಿ ಮಾದರಿಯಲ್ಲಿ ಶಿಕ್ಷಣ ಮುಂದುವರಿಯುತ್ತದೆ. ಶಾಲೆಯ ಬಿಲ್ಡಿಂಗ್‌ಅನ್ನು ಲೀಸ್ ಮೇಲೆ ತೆಗೆದುಕೊಳ್ಳಲಾಗಿದ್ದು, ಸಂಪೂರ್ಣ ಖರ್ಚನ್ನು ಅಷ್ಟೂ ಜನ ಪೋಷಕರು ಭರಿಸುತ್ತಾರೆ. ಹೆಚ್ಚಿನ ಖರ್ಚು ಬಂದರೂ ಇದು ಅನ್ವಯವಾಗುತ್ತದೆ. ಶಾಲೆಗೆ ಸಂಬಂಧಿಸಿದ ಎಲ್ಲ ಖರ್ಚಿನ ವಿವರಗಳು ಪ್ರತಿಯೊಬ್ಬ ಪೋಷಕರಿಗೂ ತಿಳಿದಿರುವುದು ಇಲ್ಲಿನ ವಿಶೇಷ.

2. ಸಿಟಿಜನ್ಸ್ ಗುರುಕುಲ
ಖಾಸಗಿ ಶಾಲೆಯೊಂದು ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಫೀಸ್ ಹೆಚ್ಚಳ ಮಾಡಿತು. ಅದೂ ಕಿಂಡರ್‌ಗಾರ್ಡನ್ ಮಕ್ಕಳಿಗೆ. ಇದನ್ನು ಪ್ರಶ್ನಿಸಿದ ಪೋಷಕರನ್ನು ಶಾಲೆಯೊಳಗೇ ಬಿಟ್ಟುಕೊಳ್ಳಲಿಲ್ಲ. ಆಗ ಪೋಷಕರು
ಶಾಲೆಯೆದುರು ಪ್ರತಿಭಟನೆ ನಡೆಸಿದರು. ಫೇಸ್‌ಬುಕ್‌ನಲ್ಲೂ ವ್ಯಾಪಕ ವಿರೋಧ ವ್ಯಕ್ತವಾಯಿತು. ಅಂಥ ಹೊತ್ತಲ್ಲಿ ಪೋಷಕರೇ ಸೇರಿ ಒಂದು ಶಾಲೆ ಯಾಕೆ ಆರಂಭಿಸಬಾರದು ಎಂಬ ಐಡಿಯಾ ಬಂದು, ಅದನ್ನು ಕಾರ್ಯರೂಪಕ್ಕೆ ತರಲು
ಒಂದಿಷ್ಟು ಜನ ಪೋಷಕರು ಮುಂದೆ ಬಂದರು. ಹಾಗೆ ಹುಟ್ಟಿಕೊಂಡಿದ್ದೇ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ‘ಸಿಟಿಜನ್ ಸ್ಕೂಲ್’. ‘ಇದರಲ್ಲಿ ಕಿಂಡರ್‌ಗಾರ್ಡನ್ ಮಾದರಿಯಲ್ಲಿ ಪುಟ್ಟ ಮಕ್ಕಳಿಗೆ ಕಲಿಸ
ಲಾಗುತ್ತದೆ. 2 ವರ್ಷದಿಂದ 7 ವರ್ಷದವರೆಗಿನ ಮಕ್ಕಳು ಇಲ್ಲಿದ್ದಾರೆ. ಪೋಷಕರ ನೆರವಿನ ಜೊತೆಗೆ ಹೊರಗಿನಿಂದ ಡೊನೇಶನ್ ಪಡೆದು ಶಾಲೆ ನಡೆಸಲಾಗುತ್ತಿದೆ. ಮೊದಲಿಗೆ ಟ್ರಸ್ಟ್ ಮಾಡಿ, ಬಳಿಕ ಜಾಗವನ್ನು ಲೀಸ್ ಪಡೆದು ಅಲ್ಲಿ ಶಾಲೆ
ಆರಂಭಿಸಲಾಯಿತು. ‘50-60 ಜನ ಪೋಷಕರು ಇದರ ಹಿಂದಿದ್ದು 8 ಜನ ಸಕ್ರಿಯವಾಗಿದ್ದಾರೆ. ಈ ಶಾಲೆಗೆಂದೇ ವಿಶಿಷ್ಟವಾದ ಸಿಲೆಬಸ್ ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಕೆಲಸವನ್ನೂ ಪೋಷಕರೆಲ್ಲ ಜತೆಗೆ ಚರ್ಚಿಸಿ ತೀರ್ಮಾನಿಸಲಾಗುತ್ತೆ’
ಎನ್ನುತ್ತಾರೆ ಶಾಲೆಯ ಸ್ಥಾಪಕ ಟ್ರಸ್ಟಿ ಅಭಿಲಾಷ್ ಮುಟ್ಲಪುಡಿ. ಮಕ್ಕಳ ಮನಸ್ಥಿತಿಗೆ ಪೂರಕವಾದ ಶಿಕ್ಷಣದ ಜೊತೆಗೆ ಭದ್ರತೆಯೂ ಸಮರ್ಪಕವಾಗಿದೆ. ಶಾಲೆ, ಮಕ್ಕಳ ನಿರ್ವಹಣೆ ತಕ್ಕಷ್ಟು ಫೀಸು ನಿಗದಿಪಡಿಸಲಾಗಿದೆ. ಖರ್ಚು ಹೆಚ್ಚಿ ಫೀಸು ಹೆಚ್ಚಿಸಬೇಕಾದಾಗ ಪೋಷಕರೆಲ್ಲ ಚರ್ಚಿಸಿ ಫೀಸಿನ ಮೊತ್ತ  ನಿಗದಿಪಡಿಸುತ್ತಾರೆ. 

Follow Us:
Download App:
  • android
  • ios