ಮಾರತ್ ಹಳ್ಳಿಯ ಖಾಸಗಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಮತ್ತದೇ ಹಳೇ ರಾಗ ಮುಂದುವರೆಸಿದ್ದಾರೆ. ಶಾಲೆಯ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಎಂಟು ದೂರುಗಳು ದಾಖಲಾದರೂ, ಇದುವರೆಗೂ ಆಡಳಿತ ಮಂಡಳಿಯ ವಿರುದ್ದದ ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ.
ಬೆಂಗಳೂರು(ಫೆ.24): ‘ನಮ್ಮ ಮಕ್ಕಳಿಗೆ ದಯವಿಟ್ಟು ನ್ಯಾಯ ಕೊಡಿಸಿ ಸಾರ್’ ಅಂತ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಪೋಷಕರು ಅಂಗಲಾಚಿದ್ದಾರೆ.
ಮಾರತ್ಹಳ್ಳಿಯ ಖಾಸಗಿ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದುವರೆಗೂ ಶಾಲೆಯ ವಿರುದ್ದ ಎಂಟು ದೂರುಗಳು ದಾಖಲಾದರೂ, ಆಡಳಿತ ಮಂಡಳಿ ವಿರುದ್ದ ಯಾವುದೇ ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ. ಈ ಮಧ್ಯ ಪೋಷಕರು ನ್ಯಾಯ ಕೊಡಿಸಿ ಅಂತಾ ಸಂಸದ ರಾಜೀವ್ ಚಂದ್ರಶೇಖರ್ ಅವರ ಕದ ತಟ್ಟಿದ್ದಾರೆ!
ಮಾರತ್ ಹಳ್ಳಿಯ ಖಾಸಗಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಮತ್ತದೇ ಹಳೇ ರಾಗ ಮುಂದುವರೆಸಿದ್ದಾರೆ. ಶಾಲೆಯ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಎಂಟು ದೂರುಗಳು ದಾಖಲಾದರೂ, ಇದುವರೆಗೂ ಆಡಳಿತ ಮಂಡಳಿಯ ವಿರುದ್ದದ ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ. ಸೂಪರ್ವೈಸರ್ ಮಂಜುನಾಥ್'ನನ್ನ ಮಾತ್ರ ಬಂಧಿಸಿರುವ ಪೊಲೀಸರು ಶಾಲಾ ಮುಖ್ಯಸ್ಥೆಯ ವಿರುದ್ಧ ಕ್ರಮಕ್ಕೆ ಇನ್ನೂ ಮೀನಾಮೇಷ ಏಣಿಸುತ್ತಿದ್ದಾರೆ.
ಶಾಲಾ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಎಂಟು ಎಫ್ಐಆರ್ಗಳು ದಾಖಲಾಗಿದ್ದರೂ, ನೆಪಮಾತ್ರಕ್ಕೂ, ಶಾಲಾ ಮುಖ್ಯಸ್ಥೆಯ ವಿರುದ್ಧ ಕ್ರಮ ಕೈಗೊಂಡಿಲ್ಲ. ವಿಧಾನಪರಿಷತ್ ಸದಸ್ಯ ಲಕ್ಷ್ಮಿನಾರಾಯಣ ಪುತ್ರಿಯ ಒಡೆತನದ ಶಾಲೆಯಾಗಿರುವುದರಿಂದ ಆಕೆಯ ವಿರುದ್ಧದ ಕ್ರಮಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಕಳೆದ ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪೋಷಕರು ಸಂಸದ ರಾಜೀವ್ ಚಂದ್ರಶೇಖರ್ ಅವರನ್ನ ಭೇಟಿಯಾಗಿದ್ದಾರೆ.
ಸಂಸದರನ್ನ ಭೇಟಿಯಾದ ಪೋಷಕರು ಅವರ ಬಳಿ ತಮ್ಮ ಆಕ್ರಂದನ ಹೇಳಿಕೊಂಡಿದ್ದಾರೆ. ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಜೊತೆ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಈಗಲಾದರೂ, ನೊಂದ ಪೋಷಕರಿಗೆ ನ್ಯಾಯ ಒದಗಿಸುತ್ತಾರಾ ಕಾದುನೋಡಬೇಕಾಗಿದೆ!
