ಮತ್ತೆ ಪಿಎಸ್‌ಐಗೆ ಶಾಸಕ ಧಮ್ಕಿ

First Published 1, Apr 2018, 7:38 AM IST
Parameshwar Naik Threatened Another Officer
Highlights

ಇದರಿಂದ ಆಕ್ರೋಶಗೊಂಡ ನೂರಾರು ಜನರು, ಸಚಿವ ಸ್ಥಾನ ಕಳೆದುಕೊಂಡರೂ ಬುದ್ಧಿ ಕಲಿಯದ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಹೂವಿನಹಡಗಲಿ: ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರಿಗೆ ಧಮ್ಕಿ ಹಾಕಿದ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ ಈಗ ಅದೇ ಮಾದರಿಯಲ್ಲಿ ಹಿರೇಹಡಗಲಿ ಠಾಣೆಯ ಪಿಎಸ್‌ಐ ರಾಘವೇಂದ್ರ ಅವರಿಗೂ ಧಮ್ಕಿ ಹಾಕಿ ಹೊಸ ವಿವಾದ ಮೈಮೇಲೆ ಎಳೆದು ಕೊಂಡಿದ್ದಾರೆ.

ಇದರಿಂದ ಆಕ್ರೋಶಗೊಂಡ ನೂರಾರು ಜನರು, ಸಚಿವ ಸ್ಥಾನ ಕಳೆದುಕೊಂಡರೂ ಬುದ್ಧಿ ಕಲಿಯದ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನ ಕುರುವತ್ತಿ ಗ್ರಾಮದಲ್ಲಿ ಸಹೋದರ ಸಂಬಂಧಿಗಳು ಪರಸ್ಪರ ಜಗಳ ಮಾಡಿಕೊಂಡು ಠಾಣೆಗೆ ಬಂದಾಗ ಬುದ್ದಿ ಹೇಳಲೆಂದು ಒಬ್ಬರಿಗೆ ಪಿಎಸ್‌ಐ ರಾಘವೇಂದ್ರ ಹೊಡೆದಿದ್ದಾರೆ.

ಈ ವಿಷಯ ತಿಳಿದ ಶಾಸಕರು, ಠಾಣೆಗೆ ಧಾವಿಸಿ ಕರ್ತವ್ಯದಲ್ಲಿದ್ದ ಪಿಎಸ್‌ಐ ರಾಘವೇಂದ್ರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಇನ್ನು ಮುಂದೆ ನಮ್ಮವರ ಮೇಲೆ ಕೈ ಮಾಡಿದರೆ ನಿನ್ನ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಪಿಎಸ್‌ಐ ರಾಘವೇಂದ್ರ ಅವರೇ ಅಂತಹದ್ದೇನೂ ಆಗಿಲ್ಲ ಎಂದು ಹೇಳಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

loader