ಆದಾಯ ತೆರಿಗೆ ಪಾವತಿ, ಹೊಸ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯಗೊಳಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಬೆನ್ನಲ್ಲೇ ಈಗಾಗಲೇ ಪ್ಯಾನ್‌ ಕಾರ್ಡ್‌ ಹೊಂದಿದವರಿಗೂ ಆಧಾರ್‌ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನವದೆಹಲಿ(ಮಾ.25): ಆದಾಯ ತೆರಿಗೆ ಪಾವತಿ, ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯಗೊಳಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಬೆನ್ನಲ್ಲೇ ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿದವರಿಗೂ ಆಧಾರ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಆಧಾರ್ ಇಲ್ಲದಿದ್ದರೆ ಸಿಮ್ ಕಾರ್ಡ್ ಇಲ್ಲ
ಮೊಬೈಲ್ ಸಿಮ್ ಪಡೆಯಲೂ ಆಧಾರ್ ನೀಡುವುದು ಶೀಘ್ರ ಕಡ್ಡಾಯವಾಗಲಿದೆ. ಈ ಸಂಬಂಧ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಗ್ರಾಹಕರ ಸಿಮ್ಕಾರ್ಡ್ಗಳನ್ನು ಆಧಾರ್ ಜೊತೆ ಸಂಯೋಜನೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ. ಹಾಲಿ ಗ್ರಾಹಕರಿಗೂ ಈ ನಿಯಮ ಅನ್ವಯವಾಗಲಿದೆ. ಟೆಲಿಕಾಂ ಕಂಪನಿಗಳು ತನ್ನ ಎಲ್ಲಾ ಗ್ರಾಹಕರ ದಾಖಲೆಗಳನ್ನು ಮರು ಪರಿಶೀಲನೆ ನಡೆಸಲಿವೆ. ಪ್ರಿಪೇಡ್ ಮತ್ತು ಪೋಸ್ಟ್ಪೇಡ್ ಗ್ರಾಹಕರು ಆಧಾರ್ ಕೆವೈಸಿ ಅರ್ಜಿಯನ್ನು ಭರ್ತಿ ಮಾಡಿಕೊಡಬೇಕಾಗುತ್ತದೆ. ಎಸ್ಎಂಎಸ್ ಮೂಲಕ ಪರಿಶೀಲನಾ ಪ್ರಕ್ರಿಯೆ ನಡೆಯಲಿದ್ದು, ಗ್ರಾಹಕರಿಗೆ ಕಂಪನಿಗಳು ಪ್ರಮಾಣೀಕರಣ ಕೋಡ್ಗಳನ್ನು ಕಳುಹಿಸಿಕೊಡಲಿವೆ.
