ಇಸ್ಲಾಮಾ ಬಾದ್(ಸೆ.27):  ಮದುವೆ ನೋಂದಣಿ ಮಾಡಿಸಿಕೊಳ್ಳುವ ಹಕ್ಕನ್ನು ಹಿಂದು ಸಮುದಾಯದವರಿಗೆ ನೀಡಿ ಪಾಕಿಸ್ತಾನ ಪಾರ್ಲಿಮೆಂಟ್ ಮಹತ್ವದ ಮಸೂದೆಗೆ ಅಂಗೀಕಾರ ನೀಡಿದೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಕಾನೂನು ಜಾರಿಗೆ ತರುವಲ್ಲಿ ಇದ್ದ ಪ್ರಮುಖ ಅಡೆತಡೆ ಈ ಮೂಲಕ ನಿವಾರಣೆಯಾಗಿದೆ. ಅಪಹರಣ, ಬಲವಂತದ ಮತಾಂತರ ಮತ್ತು ಅತ್ಯಾಚಾರದಂತಹ ಪ್ರಕರಣಗಳಲ್ಲಿ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ನಲುಗಿ ಹೋಗಿದ್ದರು. ಅವರ ಮದುವೆಗಳನ್ನು ಯಾವತ್ತೂ ಅಧಿಕೃತವಾಗಿ ಗುರುತಿಸಿರಲಿಲ್ಲ. ಹೀಗಾಗಿ ಅದು ನ್ಯಾಯಾಲಯದಲ್ಲಿ ಸಾಕ್ಷ್ಯವಾಗುತ್ತಿರಲಿಲ್ಲ. ಕೇಸುಗಳು ರದ್ದಾಗುತ್ತಿದ್ದವು. ಈಗ ಇದಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ 10 ತಿಂಗಳ ಚರ್ಚೆ ಬಳಿಕ ಮಸೂದೆಗೆ ಒಪ್ಪಿಗೆ ನೀಡಿದೆ.