ಇಸ್ಲಾಮಾಬಾದ್(ಸೆ.30): ಪಾಕಿಸ್ತಾನ ಜಾಗತಿಕವಾಗಿ ಲೇವಡಿಗೆ ಒಳಪಡುವಷ್ಟು ಜಗತ್ತಿನ ಇನ್ಯಾವುದೇ ರಾಷ್ಟ್ರ ಗುರಿಯಾಗುವುದಿಲ್ಲ. ಪಾಕ್ ಮಾಡುವ ಕೆಲಸವೇ ಅಂತದ್ದು. ಒಂದೆಡೆ ವಿಶ್ವದ ಭೂಪಟದಲ್ಲಿ ತನಗೆ ಅತೀ ಪ್ರಮುಖ ಸ್ಥಾನವಿದೆ ಎಂಬ ಭ್ರಮೆಯಲ್ಲಿರುವ ಪಾಕ್, ಮತ್ತೊಂದೆಡೆ ತಾನು ಮಾಡಿಕೊಳ್ಳುವ ಯಡವಟ್ಟಿನಿಂದ ವಿಶ್ವದ ಮುಂದೆ ನಗೆಪಾಟಲಿಗೆ ಈಡಾಗುತ್ತಿದೆ.

ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯ ಪರ್ಸ್ ಕದಿದ್ದು, ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಜುಗರ ಎದುರಿಸುವಂತಾಗಿದೆ. ಪಾಕ್ ಅಧಿಕಾರಿಯೋರ್ವ ಕುವೈತ್ ಅಧಿಕಾರಿಯ ಪರ್ಸ್ ಕದಿಯುತ್ತಿರುವ ದೃಶ್ಯಗಳು ಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಾಕಿಸ್ತಾನದ ಅಧಿಕಾರಿ ಜರಾರ್ ಹೈದರ್ ಖಾನ್, ಕುವೈತ್ ಅಧಿಕಾರಯ ಪರ್ಸ್ ಕದಿದಿದ್ದಾರೆ. ಜರಾರ್ ಪಾಕಿಸ್ತಾನದ ಗ್ರೇಡ್ 20 ಜಿಒಪಿ ಅಧಿಕಾರಿ. ತಮ್ಮ ಪರ್ಸ್ ಕಳೆದು ಹೋಗಿರುವುದಾಗಿ ಕುವೈತ್ ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಹಾಲ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಹಣಕಾಸು ಸಚಿವರು ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಅಧಿಕಾರಿಯನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.