ಪೋರ್'ಬಂದರ್(ಅ.02): ಅಕ್ರಮವಾಗಿ ಭಾರತದ ಸಮುದ್ರ ಗಡಿಯೊಳಗೆ ಪ್ರವೇಶಿಸಿದ್ದ ಪಾಕಿಸ್ತಾನಸದ ದೋಣಿಯೊಂದನ್ನು ಗುಜರಾತಿನ ಪೋರ್ ಬಂದರಿನಲ್ಲಿ ಕರಾವಳಿ ಕಾವಲು ಪಡೆ ಸೆರೆ ಹಿಡಿದಿದ್ದು, 9 ಜನರನ್ನು ವಶಕ್ಕೆ ಪಡೆದಿದ್ದಾರೆ.
ಪೋರ್ ಬಂದರ್ ಕರಾವಳಿಯಲ್ಲಿ ಬೆಳಗ್ಗೆ 10.15ಕ್ಕೆ ಭಾರತದ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನಿ ಮೂಲದ ದೋಣಿಯನ್ನು ಭಾರತ ಕರಾವಳಿ ಕಾವಲು ಪಡೆಯ ಸಮುದ್ರ ಪಾಡಕ್ ಹಡಗಿನ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಬಂಧಿತ 9 ಮಂದಿಯೂ ಪಾಕಿಸ್ತಾನದ ಮೀನುಗಾರರು ಎಂದು ತಿಳಿದುಬಂದಿದೆ.
ಕೆಲದಿನಗಳ ಹಿಂದಷ್ಟೇ ಭಾರತ ಉಗ್ರರ ಮೇಲೆ ಸರ್ಜಿಕಲ್ ದಾಳಿ ನಡೆಸಿದ ನಂತರ ಭಾರತ-ಪಾಕಿಸ್ತಾನದ ನಡುವೆ ವಾತಾವರಣ ಕಾವೇರಿದೆ. ಹೀಗಾಗಿ ಭಾರತದ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
