ನವದೆಹಲಿ[ಸೆ.09]: ತೀವ್ರ ಆರ್ಥಿಕ ಹಿಂಜರಿತದಿಂದ ನಲುಗಿರುವ ಪಾಕಿಸ್ತಾನ ಹೂಡಿಕೆ ಆಕರ್ಷಿಸಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಸೆ.4ರಿಂದ 8ರವರೆಗೆ ಅಜೆರ್‌ಬೈಜಾನ್‌ ದೇಶದ ಬಾಕುವಿನಲ್ಲಿ ಹೂಡಿಕೆದಾರರ ಸಮ್ಮೇಳನವೊಂದನ್ನು ಪಾಕಿಸ್ತಾನ ಆಯೋಜಿಸಿತ್ತು. ಅಲ್ಲಿ ಹೂಡಿಕೆದಾರರನ್ನು ಸೆಳೆಯಲು ಬೆಲ್ಲಿ ನೃತ್ಯಗಾರ್ತಿಯರಿಂದ ಪ್ರದರ್ಶನ ಏರ್ಪಡಿಸಿತ್ತು. ಇದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನದ ಈ ಹತಾಶ ಕ್ರಮಕ್ಕೆ ಅಲ್ಲಿನ ಕೆಲ ಮಾಧ್ಯಮಗಳು, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.

ಭಾರತದ ವಿರುದ್ಧ ಯುದ್ಧ ಸಾರುವ ಮಾತುಗಳನ್ನು ಆಡುತ್ತಿರುವ ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಕಚೇರಿಯ ವಿದ್ಯುತ್‌ ಬಿಲ್‌ ಕಟ್ಟಲೂ ಆಗದ ದುಸ್ಥಿತಿಗೆ ತಲುಪಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವಿಗೆ ಮೊರೆ ಇಡುತ್ತಲೇ ಬಂದಿದೆ.