Asianet Suvarna News Asianet Suvarna News

ನಮ್ಮ ಮೇಲೆ ದಾಳಿ ಮಾಡಿದರೆ ಪ್ರತಿಕಾರಕ್ಕೆ ಸಿದ್ದವೆಂದ ಪಾಕ್

ಅಂತರರಾಷ್ಟ್ರೀಯ ಸಮುದಾಯ ಭಾರತ ಗಡಿನಿಯಂತ್ರಣ ರೇಖೆಯಲ್ಲಿ ನಡೆಸುತ್ತಿರುವ ದುಷ್ಕೃತ್ಯಗಳು ಹಾಗೂ ಮಾನವ ಹಕ್ಕು ಉಲ್ಲಂಘನೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯಿದೆ'

Pakistan warns against any Indian cross border raid after Sunjuwan attack

ಇಸ್ಲಾಮಾಬಾದ್/ಶ್ರೀನಗರ(ಫೆ.12): ಭಾರತೀಯ ಸೇನೆ ಅನಾವಶ್ಯಕವಾಗಿ ನಮ್ಮ ಮೇಲೆ ಆರೋಪಿಸಿ ಗಡಿ ನಿಯಂತ್ರಣ ರೇಖೆಗಳಲ್ಲಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ' ಪಾಕ್ ಭಾರತೀಯ ಸೇನೆಗೆ ಎಚ್ಚರಿಕೆ ನೀಡಿದೆ.

ತನಿಖೆಯನ್ನು ಪ್ರಾರಂಭಿಸಿದರೂ ಸಹ ಭಾರತೀಯ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ಹಾಗೂ ನಿರಾಧಾರ ಆರೋಪಗಳನ್ನು ಮಾಡುತ್ತಾರೆ. ಕಾಶ್ಮೀರದಲ್ಲಿ ಶಸ್ತ್ರಸಜ್ಜಿತ ದಂಗೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಯಾವುದೇ ಹುರುಳಿಲ್ಲದೆ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತದೆ. ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಸೇನೆಯ ಮೇಲೆ ಇನ್ನು ಮುಂದೆ ದಾಳಿ ನಡೆಸಿದರೆ ಪ್ರತಿಕಾರ ಕ್ರಮಕ್ಕೆ ನಾವು ಸಿದ್ದರಾಗಬೇಕಾಗುತ್ತದೆ' ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಪ್ರಕಟಣೆ ತಿಳಿಸಿದೆ.

ಅಂತರರಾಷ್ಟ್ರೀಯ ಸಮುದಾಯ ಭಾರತ ಗಡಿನಿಯಂತ್ರಣ ರೇಖೆಯಲ್ಲಿ ನಡೆಸುತ್ತಿರುವ ದುಷ್ಕೃತ್ಯಗಳು ಹಾಗೂ ಮಾನವ ಹಕ್ಕು ಉಲ್ಲಂಘನೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯಿದೆ' ಎಂದು ತಿಳಿಸಿದೆ.    

ಕೆಲವು ದಿನಗಳ ಹಿಂದೆ ಜಮ್ಮುವಿನ ಶುನ್ಜುವಾನ್ ಕ್ಯಾಂಪ್'ನಲ್ಲಿ ನಡೆದ ದಾಳಿಯಲ್ಲಿ ಐವರು ಸೈನಿಕರು ಹಾಗೂ ಓರ್ವ ಸೈನಿಕನ ತಂದೆ ಹುತಾತ್ಮರಾಗಿ ಅನೇಕ ಮಕ್ಕಳು ಹಾಗೂ ಮಹಿಳೆಯರು ಗಾಯಗೊಂಡಿದ್ದರು. ಈ ಘಟನೆಗೆ ಪಾಕ್ ಮೂಲದ ಉಗ್ರ ಸಂಘಟನೆ ಜೈಶ್ ಎ ಮೊಹಮದ್ ಪ್ರಮುಖ ಕಾರಣವಾಗಿದ್ದು, ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಜೈಶ್ ಕಾರಣವೆಂದು ಭಾರತ ಆಧಾರ ಸಹಿತ ದಾಖಲೆಗಳನ್ನು ವಿಶ್ವ ಸಮುದಾಯಕ್ಕೆ ತಳಿಸುತ್ತಾ ಬಂದಿದೆ.

Follow Us:
Download App:
  • android
  • ios