ಪಾಕ್ ಈಗಾಗಲೇ ಭೂಮಿಯಿಂದ ಭೂಮಿಗೆ ಚಿಮ್ಮುವ ಹಲವು ಅಣ್ವಸ್ತ್ರಗಳನ್ನು ಯಶಸ್ವಿಯಾಗಿ ನಡೆಸಿದೆ.

ನವದೆಹಲಿ(ಜ.9): ಪಾಕಿಸ್ತಾನವು ಮೊದಲ ಬಾರಿಗೆ ಜಲಂತರ್ಗಾಮಿ ಅಣ್ವಸ್ತ್ರ ಬಾಬರ್-3ಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸಮುದ್ರದ ಆಳದಲ್ಲಿ ಸಂಚಾರಿ ಉಡಾವಣಾ ಕೇಂದ್ರದಿಂದ ಈ ಪರೀಕ್ಷೆ ನಡೆಸಲಾಗಿದ್ದು, ಅಣ್ವಸ್ತ್ರವು 450 ಕಿ.ಮೀ ಸಾಮರ್ಥ್ಯವನ್ನು ಹೊಂದಿದೆ.

ಪಾಕ್ ಈಗಾಗಲೇ ಭೂಮಿಯಿಂದ ಭೂಮಿಗೆ ಚಿಮ್ಮುವ ಹಲವು ಅಣ್ವಸ್ತ್ರಗಳನ್ನು ಯಶಸ್ವಿಯಾಗಿ ನಡೆಸಿದೆ. ಆದರೆ ಜಲಂತರ್ಗಾಮಿ ಅಣ್ವಸ್ತ್ರವನ್ನು ಪರೀಕ್ಷೆ ನಡೆಸಿರಲಿಲ್ಲ. ಹಿಂದೂ ಮಹಾಸಾಗರದಲ್ಲಿ ಅಪರಿಚಿತ ಸ್ಥಳವೊಂದರಲ್ಲಿ ಈ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯನ್ನು ಯಶಸ್ವಿಗೊಳಿಸಿರುವುದಕ್ಕೆ ಪಾಕ್ ಅಧ್ಯಕ್ಷ ಮಮ್ಮೂನ್ ಹುಸೇನ್, ಪ್ರಧಾನಿ ನವಾಜ್ ಷರೀಫ್, ಸೇನಾ ಮುಖ್ಯಸ್ಥ ಜ. ಕ್ವಾಮರ್ ಜಾವೇದ್ ಬೇಜ್ವಾ ಅಭಿನಂದನೆ ಸಲ್ಲಿಸಿದ್ದಾರೆ.