ಡೆಹ್ರಾಡೂನ್ (ಅ.01): ಸರ್ಜಿಕಲ್ ದಾಳಿಯ ನಂತರ ಪಾಕ್ ನ ಸ್ಥಿತಿ ಅನಸ್ತೆಶಿಯಾ ತೆಗೆದುಕೊಂಡ ರೋಗಿಯಂತಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕರ್ ಹೇಳಿದ್ದಾರೆ.

ಪರ್ರಿಕರ್ ಸರ್ಜಿಕಲ್ ದಾಳಿಯನ್ನು ಶ್ಲಾಘಿಸುತ್ತಾ ದಾಳಿಯನ್ನು ಹನುಮಂತನಿಗೆ ಹೋಲಿಸಿದ್ದಾರೆ.

ದಾಳಿಯ ನಂತರ ಪಾಕ್ ಸ್ಥಿತಿ ಅನಸ್ತೆಶಿಯಾ ತೆಗೆದುಕೊಂಡ ರೋಗಿಯಂತಾಗಿದೆ. ಅವನಿಗೆ ತನಗೆ ಸರ್ಜರಿ ನಡೆದಿದೆ ಎಂದು ಅನಸ್ತೇಶಿಯಾ ಇಳಿದ ಮೇಲೆ ಹೇಗೆ ಗೊತ್ತಾಗುವುದೋ ಹಾಗೆ ಪಾಕ್ ಗೆ ತಡವಾಗಿ ಗೊತ್ತಾಗಿದೆ. ಭಾರತ ಹೀಗೊಂದು ದಾಳಿ ಮಾಡಬಹುದೆಂಬ ಕಲ್ಪನೆಯೂ ಸಹ ಪಾಕ್ ಗಿರಲಿಲ್ಲ ಎಂದು ಪಾರಿಕರ್ ಹೇಳಿದ್ದಾರೆ.