ಡೋಂಟ್ ಕೇರ್: ನೀರಿಲ್ಲ ಎಂದ ಭಾರತಕ್ಕೆ ಪಾಕ್ ಗುಟುರು!
ನಮಗೇನೂ ಬೇಕಿಲ್ಲ ಸಿಂಧೂ ನೀರು ಎಂದ ಪಾಕಿಸ್ತಾನ| ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನಲೆ| 1960 ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಪರಿಷ್ಕರಣೆಗೆ ಮುಂದಾದ ಭಾರತ| ನೀರು ಸಿಗದಿದ್ದರೆ ಚಿಂತೆ ಇಲ್ಲ ಎಂದು ಪಾಕಿಸ್ತಾನ ಪ್ರತ್ಯುತ್ತರ|
ಇಸ್ಲಾಮಾಬಾದ್(ಫೆ.22): ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮರು ಪರಿಷ್ಕರಣೆ ಮಾಡುವುದಾಗಿ ಭಾರತ ಬೆದರಿಕೆಯೊಡ್ಡಿದೆ.
1960 ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಿಷ್ಕರಿಸಿ, ಪಾಕ್ ಗೆ ಹರಿಯುವ ನೀರನ್ನು ಭಾರತದ ಮೂರು ರಾಜ್ಯಗಳತ್ತ ತಿರುಗಿಸುವ ಯೋಜನೆ ಕೇಂದ್ರ ಸರ್ಕಾರದ್ದಾಗಿದೆ.
ಈ ಮೂಲಕ ಕೃಷಿಗೆ ಸಿಂಧೂ ನದಿ ನೀರನ್ನೇ ಬಹುತೇಕವಾಗಿ ನೆಚ್ಚಿಕೊಂಡಿರುವ ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಮೋದಿ ಸರ್ಕಾರದ ಗುರಿಯಾಗಿದೆ.
ಆದರೆ ಭಾರತದ ಈ ಬೆದರಿಕೆಗೆ ಪ್ರತ್ಯುತ್ತರ ನೀಡಿರುವ ಪಾಕಿಸ್ತಾನ, ಸಿಂಧೂ ನದಿ ನೀರು ಸಿಗದಿದ್ದರೆ ಏನೂ ತೊಂದರೆಯಿಲ್ಲ ಎಂದು ತಿರುಗೇಟು ನೀಡಿದೆ.
ಈ ಕುರಿತು ಮಾತನಾಡಿರುವ ಪಾಕಿಸ್ತಾನ ಜಲ ಸಂಪನ್ಮೂಲಗಳ ಸಚಿವಾಲಯ ಕಾರ್ಯದರ್ಶಿ ಖ್ವಾಜಾ ಶುಮೇಲ್, ಒಂದು ವೇಳೆ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಪರಿಷ್ಕರಣಗೆ ಮುಂದಾರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದು ಹೇಳಿದ್ದಾರೆ.
ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿಗಳ ನೀರನ್ನು ತಿರುಗಿಸಿ ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶಗಳಿಗೆ ಹರಿಸುವುದು ಭಾರತದ ಯೋಜನೆಯಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ನೀರು ಸಿಗದಂತೆ ಮಾಡುವುದು ಇದರ ಹಿಂದಿನ ಉದ್ದೇಶ.
ಪಾಕ್ ಮೇಲೆ ಮತ್ತೊಂದು ಬಾಂಬ್: ಇಮ್ರಾನ್ ನೀರಿಳಿಸ್ತಿದ್ದಾರೆ ಮೋದಿ!