ಪಾಕಿಸ್ತಾನ ಪೈಲಟ್‌ಗಳು 10ನೇ ಕ್ಲಾಸ್ ಪಾಸಾಗಿಲ್ಲ!

ಲಾಹೋರ್‌[ಡಿ.31]: 10ನೇ ತರಗತಿ ಓದಿದವರಿಗೆ ಸಣ್ಣದೊಂದು ಗುಮಾಸ್ತ ಹುದ್ದೆ ಸಿಗುವುದೂ ಕಷ್ಟ. ಅಂಥದ್ದರಲ್ಲಿ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ)ನ ಐದು ಮಂದಿ ಪೈಲಟ್‌ಗಳು 10ನೇ ತರಗತಿಯಲ್ಲೂ ಉತ್ತೀರ್ಣರಾಗಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಳು ಮಂದಿ ಪೈಲಟ್‌ಗಳು ನಕಲಿ ದಾಖಲೆ ಪತ್ರಗಳನ್ನು ನೀಡಿ ಪೈಲಟ್‌ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನ ವಿಮಾನಯಾನ ಸಂಸ್ಥೆ ಸುಪ್ರಿಂಕೋರ್ಟ್‌ಗೆ ತಿಳಿಸಿದೆ. 10ನೇ ತರಗತಿ ಪಾಸಾಗದವರು ಬಸ್‌ ಓಡಿಸಲೂ ಅರ್ಹರಲ್ಲ. ಆದರೆ, ವಿಮಾನ ಚಾಲನೆ ಮಾಡಿ ಜನರ ಜೀವವನ್ನು ಅಪಾಯಕ್ಕೆ ತಳ್ಳಿದ್ದಾರೆ ಎಂದು ಸುಪ್ರೀಕೋರ್ಟ್‌ನ ತ್ರಿಸದಸ್ಯ ಪೀಠ ಕಿಡಿಕಾರಿದೆ.

ಈ ಮಧ್ಯೆ ಸೂಕ್ತ ದಾಖಲೆಗಳನ್ನು ಒದಗಿಸದೇ ಇರುವ ಕಾರಣ ಸುಮಾರು 50 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.