ಇಸ್ಲಾಮಾಬಾದ್(ಜೂ.04): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಒಂದು ಸಾಮ್ಯತೆ ಇದೆ. ವಿದೇಶ ಯಾತ್ರೆಗಳಲ್ಲಿ ಮಕ್ಕಳಂತಾಡುವ ಈರ್ವರು ತಮ್ಮ ದೇಶಕ್ಕೆ ಮುಜುಗರ ತಂದಿಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಇಸ್ಲಾಮಿಕ್ ಸಹಕಾರ ಒಕ್ಕೂಟ ಸಮ್ಮೇಳನದಲ್ಲಿ ಭಾಗವಹಿಸಲು ಸೌದಿ ಅರೇಬಿಯಾಗೆ ತೆರಳಿದ್ದ ಇಮ್ರಾನ್ ಖಾನ್, ಸೌದಿ ದೊರೆಗೆ ಅವಮಾನಿಸುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದಾರೆ.

ಸಮ್ಮೇಳನದಲ್ಲಿ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರನ್ನು ಭೇಟಿಯಾದ ಇಮ್ರಾನ್ ಖಾನ್, ಕೇವಲ ಹಸ್ತಲಾಘವ ನೀಡಿ ಮುಂದಡಿ ಇಟ್ಟು ಸೌದಿ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಭೇಟಿಯ ವೇಳೆ ಇಮ್ರಾನ್ ಆಡಿದ ಉಭಯ ಕುಶಲೋಪಚಾರಿ ಮಾತುಗಳನ್ನು ಅನುವಾದಕ ಸೌದಿ ದೊರೆಗೆ ತಿಳಿಸುವ ಮೊದಲೇ ಇಮ್ರಾನ್ ಅಲ್ಲಿಂದ ತೆರಳಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೇ ದೊರೆ ಇರುವ ಕಡೆ ಬೊಟ್ಟು ಮಾಡಿ ತೋರಿಸುವುದು ದೌದಿ ಸಂಪ್ರದಾಯದ ಪ್ರಕಾರ ಅಗೌರವ ಎಂದು ಪರಿಗಣಿಸಲಾಗುತ್ತದೆ. ಆದರೆ ಇಮ್ರಾನ್ ಹಲವು ಬಾರಿ ಸೌದಿ ದೊರೆಯತ್ತ ಬೊಟ್ಟು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.