ಇಸ್ಲಾಮಾಬಾದ್(ಆ.14): ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಭಾರತದೊಂದಿಗೆ ಯುದ್ಧಕ್ಕೆ ಸಿದ್ಧ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ, ಅಲ್ಲಿನ ಜನರ ಬದುಕಿಗಾಗಿ ಪಾಕ್ ಸೇನೆ ಮತ್ತು ಜನತೆ ಎಲ್ಲದಕ್ಕೂ ಸಿದ್ದರಾಗಿದ್ದಾರೆ ಎಂದು ಇಮ್ರಾನ್ ಖಾನ್ ಗುಡುಗಿದ್ದಾರೆ. 

ಭಾರತದ ಕಾರ್ಯತಂತ್ರದ ಪ್ರಮಾದದಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಕಂದಕ ಸೃಷ್ಟಿಯಾಗಿದ್ದು, ಪ್ರಧಾನಿ ಮೋದಿ ಅವರ ಈ ಅಂತಿಮ ಆಟ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಲಿದೆ ಎಂದು ಇಮ್ರಾನ್ ಗುಡುಗಿದ್ದಾರೆ.

ಭಾರತದಲ್ಲಿ ವಾಸಿಸುತ್ತಿರುವ ಸುಮಾರು 18 ಕೋಟಿ ಮುಸ್ಲಿಮರಿಗೆ ಆಗುವ ಅಪಾಯವನ್ನು ಉಲ್ಲೇಖಿಸಿ ಭಾರತದಲ್ಲಿನ ಕಾಶ್ಮೀರಿ ರಾಜಕಾರಣಿಗಳು ಇಂದು ಎರಡು ರಾಷ್ಟ್ರ ಸಿದ್ಧಾಂತವನ್ನು ಅನುಮೋದಿಸುತ್ತಿದ್ದಾರೆ ಎಂದೂ ಇಮ್ರಾನ್ ಖಾನ್ ಹೇಳಿರಿವುದು ವಿವಾದದ ಕಿಡಿ ಹೊತ್ತಿಸಲಿದೆ.