ಮತ್ತೆ ಶಾಂತಿ ಮಾತುಕತೆಗೆ ಮನವಿ ಮಾಡಿದ ಪಾಕಿಸ್ತಾನ ಪ್ರಧಾನಿ| ಶಾಂತಿಗೆ ಮಾತುಕತೆ ಪುನರಾರಂಭಿಸುವಂತೆ ಇಮ್ರಾನ್ ಖಾನ್| ಯುದ್ಧದಿಂದ ಗಳಿಸುವುದು ಏನೂ ಇಲ್ಲ ಎಂದ ಪಾಕ್ ಪ್ರಧಾನಿ| ಭಯೋತ್ಪಾದನೆ ಕುರಿತು ಮಾತನಾಡಲು ಇಮ್ರಾನ್ ಒಪ್ಪಿಗೆ|
ಇಸ್ಲಾಮಾಬಾದ್(ಫೆ.27): ಭಾರತ-ಪಾಕ್ ಸಂಬಂಧ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎರಡನೇ ಬಾರಿ ಶಾಂತಿಗಾಗಿ ಮನವಿ ಮಾಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಇಂದು ಮಾತನಾಡಿದ ಇಮ್ರಾನ್ ಖಾನ್, ಯುದ್ಧವೆಂದರೆ ಕೇವಲ ತಪ್ಪಿದ ಲೆಕ್ಕಾಚಾರವೇ ಹೊರತು ಯಾವುದೇ ರಾಷ್ಟ್ರದ ಜಾಣ ನಡೆ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
"
ಭಾರತದೊಂದಿಗಿನ ಶಾಂತಿ ಮಾತುಕತೆಗೆ ತಾವು ಸಿದ್ಧ ಎಂದು ಪುನರುಚ್ಛಿಸಿರುವ ಇಮ್ರಾನ್, ಭಯೋತ್ಪಾದನೆಯ ಕುರಿತೂ ಮಾತನಾಡೋಣ ಆದರೆ ದಯವಿಟ್ಟು ಯುದ್ಧೋನ್ಮಾದದಿಂದ ಹೊರಬರುವಂತೆ ಮನವಿ ಮಾಡಿದ್ದಾರೆ.
ಯುದ್ಧವಾದರೆ ನನ್ನ ಮತ್ತು ನರೇಂದ್ರ ಮೋದಿ ಕೈಯಲ್ಲಿ ಏನೂ ಇರಲ್ಲ ಎಂದು ಎಚ್ಚರಿಸಿರುವ ಇಮ್ರಾನ್ ಖಾನ್, ಇದರ ಬದಲಾಗಿ ಶಾಂತಿಯಿಂದ ಕುಳಿತು ಮಾತುಕತೆ ಮಾಡುವುದು ಉತ್ತಮ ನಡೆಯಾಗಲಿರಲಿದೆ ಎಂದು ಸಲಹೆ ನೀಡಿದ್ದಾರೆ.
