ಲಾಹೋರ್[ಜೂ.19]:: ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನ ಜಮಾತ್-ಉದ್-ದ ವಾ (ಜೆಯುಡಿ) ಮತ್ತು ಫಲಾಹ್-ಇ-ಇನ್ಸಾನಿಯತ್ ಫೌಂಢೇಷನ್ (ಎಫ್‌ಐಎಫ್)ನಲ್ಲಿನ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಅಲ್ಲದೇ ಅಂತಾರಾಷ್ಟ್ರೀಯ ಉಗ್ರ ಕೃತ್ಯಗಳಿಗೆ ಹಣಕಾಸು ನೆರವು ನೀಡುತ್ತಿರುವ ಈ ಎರಡೂ ಸಂಘಟನೆಗಳಿಗೆ ಪಾಕ್ ನೀಡುತ್ತಿದ್ದ ವಾರ್ಷಿಕ ₹180 ಕೋಟಿ ಅನುದಾನಕ್ಕೂ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಹೀಗಾಗಿ ಅದನ್ನೂ ಸ್ಥಗಿತಗೊಳಿಸಲು ಮುಂದಾಗಿದೆ. ಜೆಯುಡಿ ಮತ್ತು ಎಫ್‌ಐಎಫ್ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ವಶಕ್ಕೆ ಪಡೆದಿದೆ.