ಮೋದಿ ಟೀಕಿಸುವ ವೇಳೆ ಪಾಕ್‌ ಸಚಿವಗೆ ಹೊಡೀತು ಕರೆಂಟ್‌!| ಪಾಕಿಸ್ತಾನದ ರೈಲ್ವೆ ಸಚಿವ ಸೇಖ್‌ ರಶೀದ್‌ಗೆ ಶುಕ್ರವಾರ ಕರೆಂಟ್‌ ಶಾಕ್‌ ಹೊಡೆದಿದೆ

ಇಸ್ಲಾಮಾಬಾದ್‌[ಆ.31]: ಭಾರತ 370ನೇ ವಿಧಿ ರದ್ದು ಮಾಡಿದ ಬಳಿಕ ಪದೇ ಪದೇ ಭಾರತದ ಮೇಲೆ ಯುದ್ಧದ ಮಾತುಗಳನ್ನು ಆಡುತ್ತಿರುವ ಪಾಕಿಸ್ತಾನದ ರೈಲ್ವೆ ಸಚಿವ ಸೇಖ್‌ ರಶೀದ್‌ಗೆ ಶುಕ್ರವಾರ ಕರೆಂಟ್‌ ಶಾಕ್‌ ಹೊಡೆದಿದೆ.

ವಿಚಿತ್ರವೆಂದರೆ ಕಾರ್ಯಕ್ರಮವೊಂದರಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಅವರು ಹಿಡಿದುಕೊಂಡಿದ್ದ ಮೈಕ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಶಾಕ್‌ ಹೊಡೆದಿದೆ.

Scroll to load tweet…

ಶಾಕ್‌ ಹೊಡೆದ ವೇಳೆ ರಶೀದ್‌ ಮೈಕ್‌ ಹಿಡಿದುಕೊಂಡೇ ಎಗರಿ ಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.