ಪಾಕಿಸ್ತಾನ ಉಗ್ರರ ಸ್ವರ್ಗ ಎಂಬ ಅಮೆರಿಕದ ಇತ್ತೀಚಿನ ಕಟುವಾಗಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಈ ಉಗ್ರರನ್ನು ಪೋಷಿಸಿದ್ದೇ ನೀವು ಎಂದು ವಿಶ್ವದ ದೊಡ್ಡಣ್ಣನಿಗೆ ತಿರುಗೇಟು ನೀಡಿದೆ.
ನ್ಯೂಯಾರ್ಕ್: ಪಾಕಿಸ್ತಾನ ಉಗ್ರರ ಸ್ವರ್ಗ ಎಂಬ ಅಮೆರಿಕದ ಇತ್ತೀಚಿನ ಕಟುವಾಗಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಈ ಉಗ್ರರನ್ನು ಪೋಷಿಸಿದ್ದೇ ನೀವು ಎಂದು ವಿಶ್ವದ ದೊಡ್ಡಣ್ಣನಿಗೆ ತಿರುಗೇಟು ನೀಡಿದೆ.
ಹಕ್ಕಾನಿ, ಹಫೀಜ್ ಸಯೀದ್‌ನಂತಹವರ ವಿಷಯ ಮುಂದಿಟ್ಟುಕೊಂಡು ನಮ್ಮನ್ನು ದೂಷಿಸುವುದು ಸರಿಯಲ್ಲ. ಆತನನ್ನು ಪೋಷಿಸಿದ್ದೇ ನೀವು. 20-30 ವರ್ಷಗಳ ಹಿಂದೆ ಅವರೆಲ್ಲಾ ನಿಮಗೆ ಆಪ್ತರೇ ಆಗಿದ್ದರು ಎಂದು ಹೇಳಿದೆ.
ಇಲ್ಲಿನ ಏಷ್ಯಾ ಸೊಸೈಟಿ ಫೋರಂನಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಖಾವಾಜಾ ಆಸೀಫ್, ‘ಪಾಕಿಸ್ತಾನ, ಹಕ್ಕಾನಿ ಜಾಲ ಮತ್ತು ಹಫೀಜ್ ಸಯೀದ್‌ಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸುವುದು ಸುಲಭ.
ಆದರೆ, ನಮಗೆ ಕೆಲವೊಂದು ಬಾಧ್ಯತೆಗಳಿವೆ. ಈ ಬಾಧ್ಯತೆಯಿಂದ ಹೊರಬರಲು ನಮಗೆ ಇನ್ನಷ್ಟು ಸಮಯಾವಕಾಶ ಬೇಕಿದೆ. ಹಕ್ಕಾನಿ ಜಾಲವನ್ನು ಅಥವಾ ಹಫೀಜ್ ಸಯೀದ್‌ನ ಕಾರಣಕ್ಕಾಗಿ ಪಾಕಿಸ್ತಾನವನ್ನು ದೂಷಿಸಬಾರದು. ಅವರಿಗೆ ಊಟ, ವೈನ್ ನೀಡಿ ಪೋಷಿಸಿದ್ದೇ ಅಮೆರಿಕ. ಆದರೆ, ಈಗ ನಮ್ಮನ್ನು ದೂಷಿಸಬೇಡಿ ಎಂದರು.
