ನವದೆಹಲಿ[ಫೆ. 23]  ಕೊಟ್ಟ ಹೊಡೆತಕ್ಕೆ ತತ್ತರಿಸಿಹೋಗಿದ್ದರೂ ಗಡಿಯಲ್ಲಿ  ಮತ್ತೆ ಪಾಕ್ ಪುಂಡಾಟ ಶುರು ಹಚ್ಚಿಕೊಂಡಿದೆ.

ಪೂಂಚ್ ಗಡಿಯಲ್ಲಿ ಪಾಕ್  ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ. ಜನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ದಾಳಿ ಮಾಡಿದ್ದು  ಮನ್ಕೋಟ್ ಪ್ರದೇಶಗಳಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ.

ಚಾಮರಾಜನಗರ ಯುವಕನ ಸ್ಟೇಟಸ್ ಹುಚ್ಚಾಟ,ಇಂತವರ ಮೇಲೂ ಮಾಡ್ಬೇಕು ಸರ್ಜಿಕಲ್ ದಾಳಿ

ಕುಲ್ಗಾಮ್ ಸೇನಾ ಕ್ಯಾಂಪ್ ಮೇಲೆ ಗುಂಡಿನ ದಾಳಿ ಮಾಡಿದೆ. ಅಷ್ಟೂ ಸಾಲದು ಎಂಬಂತೆ ಖುದ್ವಾನಿ ಸೇನಾ ಕ್ಯಾಂಪ್ ಬಳಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಯೋಧರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ತಕ್ಕ ಪ್ರತ್ಯುತ್ತರ ನೀಡಿದ್ದರೂ ಬುದ್ಧಿ ಕಲಿಯದ ಪಾಕ್ ಪುಂಡಾಟ ಮೆರೆದಿದ್ದು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆತಂತಿದೆ.