ಇಸ್ಲಾಮಾಬಾದ್(ಆ.15): ಭಾರತದಂತೆ ನೆರೆಯ ಪಾಕಿಸ್ತಾನ ಕೂಡ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಭಾರತದ ಯುದ್ಧ ವಿಮಾನ ಹೊಡೆದುರುಳಿಸಿದ್ದ ಇಬ್ಬರು ಪಾಕಿಸ್ತಾನ ವಾಯುಸೇನೆಯ ಇಬ್ಬರು ಪೈಲೆಟ್'ಗಳಿಗೆ ಅತ್ಯುನ್ನತ ಸೇನಾ ಮೆಡಲ್ ನೀಡಿ ಗೌರವಿಸಲಾಗಿದೆ.

ಕಳೆದ ಫೆಬ್ರವರಿ 27 ರಂದು ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಚಲಾಯಿಸುತ್ತಿದ್ದ ಮಿಗ್-21 ಯುದ್ಧ ವಿಮಾನ ಹೊಡೆದುರುಳಿಸಿದ್ದ ಪಾಕಿಸ್ತಾನದ ವಿಂಗ್ ಕಮಾಂಡರ್ ಮೊಹ್ಮದ್ ನೌಮನ್ ಆಲಿ ಅವರಿಗೆ ಸಿತಾರ್-ಇ- ಜುರಾತ್  ಹಾಗೂ ಸ್ಕ್ವಾಡ್ರನ್ ಲೀಡರ್ ಹಸನ್ ಮೊಹ್ಮದ್ ಸಿದಿಕ್ಕಿ ಅವರಿಗೆ ತಂಘಾ- ಇ- ಶುಜಾತ್ ಪ್ರಶಸ್ತಿ ಘೋಷಿಸಲಾಗಿದೆ.

ಮುಂದಿನ ವರ್ಷ ಮಾರ್ಚ್ 23ರಂದು ನಡೆಯಲಿರುವ ಪಾಕಿಸ್ತಾನ ಡೇ ಸಂದರ್ಭದಲ್ಲಿ ಇಬ್ಬರೂ ಅಧಿಕಾರಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು  ಪಾಕಿಸ್ತಾನ ಸೇನೆ ತಿಳಿಸಿದೆ.