ಪಾಕಿಸ್ತಾನ ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೈನಿಕರ ಮೇಲೆ ವಿನಾಕಾರಣ ದಾಳಿ ಮಾಡುವುದನ್ನು ಬಿಜೆಪಿ ಖಂಡಿಸಿದೆ. ಪಾಕನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವಂತೆ ಜಾಗತಿಕ ದೇಶಗಳಿಗೆ ಕರೆ ನೀಡಿದೆ.

ನವದೆಹಲಿ (ಮೇ.01): ಪಾಕಿಸ್ತಾನ ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೈನಿಕರ ಮೇಲೆ ವಿನಾಕಾರಣ ದಾಳಿ ಮಾಡುವುದನ್ನು ಬಿಜೆಪಿ ಖಂಡಿಸಿದೆ. ಪಾಕನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವಂತೆ ಜಾಗತಿಕ ದೇಶಗಳಿಗೆ ಕರೆ ನೀಡಿದೆ.

ಪಾಕಿಸ್ತಾನವು ಅಂತರಾಷ್ಟ್ರೀಯ ಒಪ್ಪಂದವನ್ನು ಮುರಿದು ಭಾರತದ ಮೇಲೆ ಪದೇ ಪದೇ ದಾಳಿ ನಡೆಸುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಇಂತಹ ಕ್ರೂರ ಕೃತ್ಯವನ್ನು ನಾವು ಖಂಡಿಸುತ್ತೇವೆ. ಜಾಗತಿಕ ಶಕ್ತಿಗಳು ಇಂತಹ ನಡೆಯ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಘೋಷಿಸಬೇಕು ಎಂದು ಬಿಜೆಪಿ ಹೇಳಿದೆ.

ಪಾಕ್'ನ ಈ ಹೇಯ ಕೃತ್ಯವನ್ನು ಪ್ರಧಾನಿ ಮೋದಿಯವರು ಕೂಡಾ ಖಂಡಿಸಿದ್ದಾರೆ. ಭಯೋತ್ಪಾದನೆಯು ದೊಡ್ಡ ತಲೆನೋವಾಗಿದೆ. ಯಾವ ದೇಶವೂ ಇದನ್ನು ಸಹಿಸಲಾಗದು. ಬೇರು ಸಮೇತ ಕಿತ್ತು ಹಾಕಬೇಕು. ಭಯೋತ್ಪಾದನೆಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಹಾಗೂ ಟರ್ಕಿ ಅಧ್ಯಕ್ಷ ತಯ್ಯಿಬ್ ಎರ್ಡೋಗಾನ್ ಜಂಟಿ ಹೇಳಿಕೆ ನೀಡಿದ್ದಾರೆ.

 ಭಾರತ ಹಾಗೂ ಟರ್ಕಿ ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲಿದೆ. ಸಹಕಾರವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದರು. ಮೋದಿಯವರ ಈ ಮಾತಿಗೆ ಟರ್ಕಿ ಅಧ್ಯಕ್ಷ ಎರ್ಡೋಗಾನ್ ತಮ್ಮ ಬೆಂಬಲ ಸೂಚಿಸಿದ್ದಾರೆ. ಭಾರತದ ಪರ ಟರ್ಕಿ ಯಾವಾಗಲೂ ನಿಲ್ಲುತ್ತದೆ ಎಂದಿದ್ದಾರೆ.