ಯಾವ ದೇಶದವರು ಎಂಬುದನ್ನು ಬಹಿರಂಗ ಪಡಿಸದ ಪಾಕ್ ವಿದೇಶಾಂಗ ಸಚಿವ

ನ್ಯೂಯಾರ್ಕ್: ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕೈದಿ ಕುಲಭೂಷಣ್ ಜಾಧವ್‌ನನ್ನು 2014ರಲ್ಲಿ ಪೇಶಾವರದ ಶಾಲೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕನೊಂದಿಗೆ ವಿನಿಮಯಕ್ಕೆ ಪ್ರಸ್ತಾವನೆ ಇಡಲಾಗಿತ್ತು ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖಾವಾಜಾ ಮುಹಮ್ಮದ್ ಹೇಳಿಕೊಂಡಿದ್ದಾರೆ.

ಈ ಮೂಲಕ ಕುಲಭೂಷಣ್ ಜಾಧವ್ ಬಿಡುಗಡೆಗೆ ಭಾರತ ಯತ್ನ ನಡೆಸಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾವ ದೇಶದವರು ಮತ್ತು ಆಫ್ಘಾನಿಸ್ತಾನದ ಭಯೋತ್ಪಾದಕನ ಹೆಸರನ್ನು ಖಾವಾಜಾ ಬಹಿರಂಗ ಪಡಿಸಿಲ್ಲ. ‘ಪೇಶಾವಾರದ ಶಾಲೆಯಲ್ಲಿ ಮಕ್ಕಳನ್ನು ಹತ್ಯೆ ಮಾಡಿದ ಉಗ್ರನನ್ನು ಆಫ್ಘಾನಿಸ್ತಾನದ ಜೈಲಿನಲ್ಲಿ ಇರಿಸಲಾಗಿದೆ. ಭಯೋತ್ಪಾದಕನನ್ನು ಇನ್ನೊಬ್ಬ ಭಯೋತ್ಪಾಕ (ಕುಲಭೂಷಣ್ ಜಾಧವ್) ಜೊತೆ ಪಾಕಿಸ್ತಾನ ವಿನಿಯಮ ಮಾಡಿಕೊಳ್ಳಬಹುದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ನನಗೆ ತಿಳಿಸಿದ್ದರು’ ಎಂದು ಹೇಳಿಕೊಂಡಿದ್ದಾರೆ.

ಆದರೆ,ಈ ಕುರಿತಾದ ಹೆಚ್ಚಿನ ವಿವರಗಳನ್ನು ಅವರು ಬಹಿರಂಗ ಪಡಿಸಿಲ್ಲ.