ಭಾರತದ ಗಡಿಯೊಳಗೆ ನುಸುಳುವ ಒಬ್ಬೊಬ್ಬ ಉಗ್ರರಿಗೆ ಪಾಕಿಸ್ತಾನ ಒಂದೊಂದು ಕೋಟಿ ಕೊಡುತ್ತದೆ ಎಂದು ಪಿಒಕೆ ಮುಖಂಡ ಸರ್ದಾರ್ ರಯೀಸ್ ಇಂಕ್ಲಾಬಿ ಹೇಳಿರುವ ವಿಡಿಯೋ ದೃಶ್ಯ ಇಲ್ಲಿದೆ.
ನವದೆಹಲಿ(ಡಿ. 12): ಭಾರತದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನದ ಕುಮ್ಮಕ್ಕು ಇರುವುದು ಹೌದು. ಈ ವಿಷಯವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಪದೇಪದೇ ಪ್ರಸ್ತಾಪ ಮಾಡುತ್ತಲೇ ಇದೆ, ಸಾಕ್ಷ್ಯಾಧಾರಗಳನ್ನು ಒದಗಿಸುತ್ತಲೇ ಇದೆ. ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಬಹುತೇಕ ಉಗ್ರರು ಪಾಕಿಸ್ತಾನದಲ್ಲೇ ತರಬೇತಿ ಪಡೆದಿರುವ ಬಗ್ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಆದರೆ, ಪಾಕಿಸ್ತಾನ ಮಾತ್ರ ಇದನ್ನು ಅಲ್ಲಗಳೆಯುತ್ತಲೇ ಬಂದಿದೆ. ಇದೀಗ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಖಲಾದ ವಿಡಿಯೋವೊಂದು ಈ ಬಗ್ಗೆ ಸ್ಪಷ್ಟ ಸಾಕ್ಷ್ಯ ಒದಗಿಸಿದೆ. ಭಾರತದ ಗಡಿಯೊಳಗೆ ನುಸುಳುವ ಒಬ್ಬೊಬ್ಬ ಉಗ್ರರಿಗೆ ಪಾಕಿಸ್ತಾನ ಒಂದೊಂದು ಕೋಟಿ ಕೊಡುತ್ತದೆ ಎಂದು ಪಿಒಕೆ ಮುಖಂಡ ಸರ್ದಾರ್ ರಯೀಸ್ ಇಂಕ್ಲಾಬಿ ಅವರು ಹೇಳುತ್ತಿರುವ ವಿಡಿಯೋ ದೃಶ್ಯವೊಂದನ್ನು ಎಎನ್'ಐ ಸುದ್ದಿ ಸಂಸ್ಥೆ ಇಂಟರ್ನೆಟ್'ಗೆ ಅಪ್ಲೋಡ್ ಮಾಡಿದೆ.

