ಪಾಕಿಸ್ತಾನ ಕುಲಭೂಷಣ್ ಜಾಧವ್'ರನ್ನು ಇರಾನ್ ನಿಂದಲೇ ಬಂಧಿಸಲಾಗಿದೆ ಎಂಬ ಸತ್ಯ ಬಹಿರಂಗಗೊಂಡಿದೆ. ಪಾಕ್  ಸೇನೆಯ ನಿವೃತ್ತ ಅಧಿಕಾರಿ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

ನವದೆಹಲಿ(ಮೇ.25): ಪಾಕಿಸ್ತಾನ ಕುಲಭೂಷಣ್ ಜಾಧವ್'ರನ್ನು ಇರಾನ್ ನಿಂದಲೇ ಬಂಧಿಸಲಾಗಿದೆ ಎಂಬ ಸತ್ಯ ಬಹಿರಂಗಗೊಂಡಿದೆ. ಪಾಕ್ ಸೇನೆಯ ನಿವೃತ್ತ ಅಧಿಕಾರಿ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

ಪಾಕಿಸ್ತಾನದ ಟಿವಿ ಚಾನೆಲ್'ನಲ್ಲಿ ಸತ್ಯದ ಅನಾವರಣವಾಗಿದೆ. ಈ ಮೂಲಕ ಪಾಕಿಸ್ತಾನ ತಾನೇ ಮಾಹಿತಿಯನ್ನು ಬಹಿರಂಗಪಡಿಸಿಕೊಂಡಿದೆ. ಅಪಹರಣ ಮಾಡಿರುವುದು ಅಧಿಕೃತವಾಗಿವಾಗಿ ಹೊರಹಾಕಿದ್ದರೂ ಷರೀಫ್ ಮತ್ತು ಕಂಪನಿ ಮಾತ್ರ ಇದನ್ನು ನಿರಾಕರಿಸುತ್ತಿದ್ದಾರೆ. ]ಭಾರತ ಮುಂಚಿನಿಂದಲೂ ಇದನ್ನೇ ಸಮರ್ಥಿಸುತ್ತಾ ಬಂದಿತ್ತು. ಅಂತರಾಷ್ಟ್ರೀಯ ನ್ಯಾಯಾಲಯದಲ್ಲೂ ಈ ಬಗ್ಗೆ ವಾದಿಸಿದ್ದ ಪಾಕ್ ತನ್ನ ಕೃತ್ಯವನ್ನು ತಾನೇ ಹೊರಹಾಕಿಕೊಳ್ಳುವುದರೊಂದಿಗೆ ಸತ್ಯದ ಅನಾವರಣವಾಗಿದೆ.