ಶ್ರೀನಗರ(ಸೆ.02): ಗಡಿದಾಟಿ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ 38 ಭಯೋತ್ಪಾದಕರನ್ನು ಬಗ್ಗು ಬಡಿದ ಭಾರತೀಯ ಸೇನೆಯ ದಿಟ್ಟ ಸರ್ಜಿಕಲ್ ದಾಳಿ ಕಾರ್ಯಾಚರಣೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. 

ಆದರೆ ಇದು ಪಾಕ್ ಗೆ ತಡೆದುಕೊಳ್ಳಲಾಗುತ್ತಿಲ್ಲ, ಇದರಿಂದಾಗಿ ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚಿದಂತೆ ಕಾಣುತ್ತೆ. ಭಾರತದ ಗಡಿ ಭಾಗವಾಗದ ಪಠಾಣ್ ಕೋಟ್, ಫರೀದ್​ಕೋಟೆ, ಸೇರಿದಂತೆ ಹಲವು ಕಡೆ ಹಳದಿ ಮತ್ತು ಹಸಿರು ಬಣ್ಣದ ಬಲೂನ್​ ಪತ್ತೆಯಾಗಿವೆ. 

ಬಲೂನ್​ ಮೇಲೆ ಭಾರತ ನಡೆಸಿರೋ ಸರ್ಜಿಕಲ್ ದಾಳಿಗೆ ಪಾಕ್​ ಪ್ರತಿಕಾರದ ದಾಳಿ ಮಾಡೇ ಮಾಡುತ್ತೆ ಎಂದು ಉರ್ದುವಿನಲ್ಲಿ ಬರೆದಿರೋ ಬಲೂನ್​ಗಳ ಸಿಕ್ಕಿವೆ. 

ಈ ಬಲೂನ್​ಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಲೂನ್​ಗಳನ್ನು ವಶಕ್ಕೆ ಪಡೆದ ದಿನ್​ನಗರದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.