ಬೆಂಗಳೂರಿನ ಆಕರ್ಷಕ ಸ್ಥಳಗಳು, ಫ್ಯೂಚರ್ ಬೆಂಗಳೂರಿನ ಅದ್ಭುತ ಚಿತ್ರಗಳೂ ಸೇರಿದಂತೆ, ನಾಡ ಪ್ರಭು ಕೇಂಪೆಗೌಡ, ರಾಕ್ಷಸರ ಚಿತ್ರಗಳು ಮೆಟ್ರೋ ನಿಲ್ದಾಣಗಳ ಕಳೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಬೆಂಗಳೂರು(ಅ. 12): ಉದ್ಯಾನನಗರಿಯ ಮೆಟ್ರೋ ನಿಲ್ದಾಣಗಳು ಇನ್ಮುಂದೆ ಬಣ್ಣ ಬಣ್ಣದ ಚಿತ್ತಾರಗಳಿಂದ ಪ್ರಯಾಣಿಕರನ್ನ ಮತ್ತಷ್ಟು ಆಕರ್ಷಸಲಿವೆ. ಮೆಜೆಸ್ಟಿಕ್ ಸೇರಿದಂತೆ ನಗರದ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸ್ಟ್ರೀಟ್ ಆರ್ಟ್ ಹಾಗೂ ಸೃಷ್ಟಿ ಆರ್ಟ್ ಕಾಲೇಜಿನ ವಿದ್ಯಾರ್ಥಿಗಳು ಸುಂದರ ಚಿತ್ರಗಳನ್ನ ರಚಿಸುತ್ತಿದ್ದಾರೆ. ಬೆಂಗಳೂರಿನ ಆಕರ್ಷಕ ಸ್ಥಳಗಳು, ಫ್ಯೂಚರ್ ಬೆಂಗಳೂರಿನ ಅದ್ಭುತ ಚಿತ್ರಗಳೂ ಸೇರಿದಂತೆ, ನಾಡ ಪ್ರಭು ಕೇಂಪೆಗೌಡ, ರಾಕ್ಷಸರ ಚಿತ್ರಗಳು ಮೆಟ್ರೋ ನಿಲ್ದಾಣಗಳ ಕಳೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಂದಿನಿಂದ ಪ್ರಾರಂಭವಾಗಿರುವ ಚಿತ್ರಬಿಡಿಸುವ ಕೆಲಸ ಮುಂದಿನ ನಾಲ್ಕೈದು ದಿನಗಳಲ್ಲಿ ಪೂರ್ಣಗೊಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred