Asianet Suvarna News Asianet Suvarna News

ಸೆನ್ಸಾರ್ ಮಂಡಳಿ ಅಧ್ಯಕ್ಷ ಹುದ್ದೆಯಿಂದ ಪಹ್ಲಾಜ್ ನಿಹಲಾನಿ ವಜಾ

ಕೇಂದ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರನ್ನು ಸರ್ಕಾರ ವಜಾಗೊಳಿಸಿದ್ದು, ಖ್ಯಾತ ಸಾಹಿತಿ ಪ್ರಸೂನ್ ಜೋಶಿಯವರನ್ನು ಆ ಹುದ್ದೆಗೆ ನೇಮಿಸಿದೆ. ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾದ ಬಳಿಕ ಪಹ್ಲಾಜ್ ನಿಹಲಾನಿಯ ಹಲವು ನಡೆಗಳು ವಿವಾದವನ್ನು ಸೃಷ್ಟಿಸಿದ್ದವು.

Pahlaj Nihalani Sacked As Censor Board Chief

ಮುಂಬೈ: ಕೇಂದ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರನ್ನು ಸರ್ಕಾರ ವಜಾಗೊಳಿಸಿದ್ದು, ಖ್ಯಾತ ಸಾಹಿತಿ ಪ್ರಸೂನ್ ಜೋಶಿಯವರನ್ನು ಆ ಹುದ್ದೆಗೆ ನೇಮಿಸಿದೆ.

ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾದ ಬಳಿಕ ಪಹ್ಲಾಜ್ ನಿಹಲಾನಿಯ ಹಲವು ನಡೆಗಳು ವಿವಾದವನ್ನು ಸೃಷ್ಟಿಸಿದ್ದವು. ಪಹ್ಲಾಜ್ ನಿಹಲಾನಿ ಮಂಡಳಿಯನ್ನು ತಮ್ಮ ಸ್ವತ್ತು ಎಂಬಂತೆ ವರ್ತಿಸುತ್ತಿದ್ದರು ಎಂದು ಸಹೋದ್ಯೋಗಿಗಳು ಅವಲತ್ತುಕೊಂಡಿದ್ದರೆ, ಸಿನೆಮಾ ನಿರ್ಮಾಪಕರು, ನಿರ್ದೇಶಕರು ಅನಗತ್ಯ ಹಸ್ತಕ್ಷೇಪ ಹಾಗೂ ನೈತಿಕ ಪೊಲೀಸ್’ಗಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ಇಂದು ಸರ್ಕಾರ್, ಲಿಪ್’ಸ್ಟಿಕ್ ಅಂಡರ್ ಮೈ ಬುರ್ಖಾ ಮುಂತಾದ ಚಿತ್ರಗಳಿಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದರು.

ಚಲನಚಿತ್ರಗಳಲ್ಲಿ ಲೈಂಗಿಕ ದೃಶ್ಯಗಳು, ಬೈಗುಳ, ಫೋನ್ ಸೆಕ್ಸ್ ಮುಂತಾದವುಗಳಿಗೆ ಪಹ್ಲಾಜ್ ನಿಹಲಾನಿ ತೀವ್ರವಾಗಿ ವಿರೋಧಿಸುತ್ತಿದ್ದರು.

 

Follow Us:
Download App:
  • android
  • ios