ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತಪದ್ಮನಾಭ ದೇಗುಲದ ರಹಸ್ಯ ಕೋಣೆಗಳಲ್ಲಿ ದೊರೆತ ಸುಮಾರು 300 ಕೋಟಿ ರು. ಮೌಲ್ಯದ ಚಿನ್ನಾಭರಣಗಳು, ಸಂಪತ್ತನ್ನು ಸಾರ್ವ ಜನಿಕ ಪ್ರದರ್ಶನಕ್ಕಿಡುವ ಪ್ರಸ್ತಾಪವೊಂದನ್ನು ಕೇರಳ ಹಾಗೂ ಕೇಂದ್ರ ಸರ್ಕಾರಗಳ ಮುಂದೆ ಸಲ್ಲಿಸಲಾಗಿದೆ. ಈ ಪ್ರಸ್ತಾಪಕ್ಕೆ ಉಭಯ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ. 

ಆದರೆ ಇದಕ್ಕೆ ದೇಗುಲದ ವ್ಯವಹಾರ ಗಳನ್ನು ನಿರ್ವಹಿಸುವ ತಿರುವಾಂಕೂರು ರಾಜಮನೆತನ ಹಾಗೂ ಸುಪ್ರೀಂ ಕೋರ್ಟ್ ಒಪ್ಪಿದರೆ ಸಾರ್ವಜನಿಕ ಪ್ರದರ್ಶನಕ್ಕೆ ಅನುಕೂಲ ಕಲ್ಪಿಸಲು ತಾವು ಸಿದ್ಧ ಎಂದು ಉಭಯ ಸರ್ಕಾರಗಳು ಸ್ಪಷ್ಟಪಡಿಸಿವೆ.

ಕೇರಳದ ವಾಣಿಜ್ಯೋದ್ಯಮ ಒಕ್ಕೂಟ ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪ್ರಸ್ತಾಪ ಇರಿಸಿದೆ. ಕವಾಟಗಳಲ್ಲಿ ದೊರೆತ ಸಂಪತ್ತನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಿದರೆ ವರ್ಷಕ್ಕೆ ಪ್ರವಾಸಿಗರಿಂದ 50 ಕೋಟಿ ರು. ಆದಾಯ ಗಳಿಸಬಹುದು. ಪ್ರವಾಸೋದ್ಯಮ ವನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ ಎಂದು ವಾಣಿಜ್ಯೋದ್ಯಮ ಒಕ್ಕೂಟದ ಆಶಯ.