ಪದ್ಮಾವತ್ ಸಿನಿಮಾ ಜನವರಿ 25ರಂದು ದೇಶಾದ್ಯಂತ ಬಿಡುಗಡೆಯಾಗಬೇಕಿತ್ತು. ವಿವಾದವಿರುವ ಈ ಸಿನಿಮಾ ಬಿಡುಗಡೆಗೆ  ಗುಜರಾತ್, ರಾಜಸ್ಥಾನ್, ಹರ್ಯಾಣ, ಮಧ್ಯ ಪ್ರದೇಶ ರಾಜ್ಯಗಳು ನಿಷೇಧವೇರಿದ್ದವು.

ನವದೆಹಲಿ(ಜ.18): ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದ ಬಾಲಿವುಡ್ ಸಿನಿಮಾ ಪದ್ಮಾವತ್'ಗೆ ನಿಷೇಧ ಹೇರಿದ್ದ 4 ರಾಜ್ಯಗಳಿಗೆ ಸುಪ್ರಿಂ ಕೋರ್ಟ್ ತಡೆ ನೀಡಿದೆ.

ಪದ್ಮಾವತ್ ಸಿನಿಮಾ ಜನವರಿ 25ರಂದು ದೇಶಾದ್ಯಂತ ಬಿಡುಗಡೆಯಾಗಬೇಕಿತ್ತು. ವಿವಾದವಿರುವ ಈ ಸಿನಿಮಾ ಬಿಡುಗಡೆಗೆಗುಜರಾತ್, ರಾಜಸ್ಥಾನ್, ಹರ್ಯಾಣ, ಮಧ್ಯ ಪ್ರದೇಶ ರಾಜ್ಯಗಳು ನಿಷೇಧವೇರಿದ್ದವು. ತಡೆ ನೀಡಿರುವ ಸುಪ್ರಿಂಆ ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆಯುಂಟಾಗದಂತೆ ರಾಜ್ಯ ಸರ್ಕಾರ ಚಿತ್ರ ಮಂದಿರಗಳಿಗೆ ಹಾಗೂ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆದೇಶಿಸಿದೆ.

ಸಿನಿಮಾ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದನಿರ್ಮಾಪಕ ಪರ ವಕೀಲರಾದ ಹರೀಶ್ ಸಾಳ್ವೆ, ನಾಲ್ಕು ರಾಜ್ಯಗಳು ಚಿತ್ರವನ್ನು ನಿಷೇಧಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತರುತ್ತಿವೆ. ಒಂದು ವೇಳೆ ಚಿತ್ರ ಬಿಡುಗಡೆಗೆತೊಂದರೆ ನೀಡಿದರೆ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೆಶಿಸುತ್ತದೆ.. ಕೇಂದ್ರ ಸರ್ಕಾರ ಕೂಡ ಸಿನಿಮಾ ಬಿಡುಗಡೆಗೆ ಸೂಕ್ತ ನಿರ್ದೇಶನ ನೀಡಬೇಕು' ಎಂದು ತಿಳಿಸಿದ್ದಾರೆ.