‘ನಾವು ಕಪ್ಪು ವರ್ಣೀಯರೊಂದಿಗೆ ವಾಸವಿದ್ದೇವೆ ಎಂದು ಹೇಳಿರುವ ತರುಣ್ ವಿಜಯ್ ಅವರಿಗೆ ನಾವ್ಯಾರು ಎಂಬುದನ್ನು ಕೇಳಲು ಬಯಸುತ್ತೇನೆ. ಬಿಜೆಪಿ ಅಥವಾ ಆರ್‌ಎಸ್‌ಎಸ್‌ನವರು ಮಾತ್ರ ನಿಜವಾದ ಭಾರತೀಯರು ಎಂಬುದು ಅವರ ಮಾತಿನ ಮರ್ಮವೇ?’ ಎಂದು ಟ್ವೀಟರ್‌ನಲ್ಲಿ ತರುಣ್‌ರನ್ನು ಮಾಜಿ ವಿತ್ತ ಸಚಿವ ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ(ಏ.09): ದಕ್ಷಿಣ ಭಾರತೀಯರ ವಿರುದ್ಧದ ಬಿಜೆಪಿ ನಾಯಕ ಮತ್ತು ಮಾಜಿ ಬಿಜೆಪಿ ಸಂಸದ ತರುಣ್ ವಿಜಯ್ ಅವರ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ತಾಣ ಮತ್ತು ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ‘ದೇಶದಲ್ಲಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಮಾತ್ರವೇ ಭಾರತೀಯರೇ’ ಎಂದು ಪ್ರಶ್ನಿಸುವ ಮೂಲಕ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

‘ನಾವು ಕಪ್ಪು ವರ್ಣೀಯರೊಂದಿಗೆ ವಾಸವಿದ್ದೇವೆ ಎಂದು ಹೇಳಿರುವ ತರುಣ್ ವಿಜಯ್ ಅವರಿಗೆ ನಾವ್ಯಾರು ಎಂಬುದನ್ನು ಕೇಳಲು ಬಯಸುತ್ತೇನೆ. ಬಿಜೆಪಿ ಅಥವಾ ಆರ್‌ಎಸ್‌ಎಸ್‌ನವರು ಮಾತ್ರ ನಿಜವಾದ ಭಾರತೀಯರು ಎಂಬುದು ಅವರ ಮಾತಿನ ಮರ್ಮವೇ?’ ಎಂದು ಟ್ವೀಟರ್‌ನಲ್ಲಿ ತರುಣ್‌ರನ್ನು ಮಾಜಿ ವಿತ್ತ ಸಚಿವ ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತದ ನೋಯ್ಡಾದಲ್ಲಿ ಆಫ್ರಿಕನ್ನರ ಮೇಲಿನ ದಾಳಿ ಕುರಿತಾದ ಅಂತಾರಾಷ್ಟ್ರೀಯ ವಾಹಿನಿಯಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ತರುಣ್ ವಿಜಯ್ ನಾವು ಕರಿಯರೊಂದಿಗೆ ವಾಸಿಸುತ್ತಿದ್ದೇವೆ. ನಾವೇನಾದರೂ, ವರ್ಣಬೇಧ ನೀತಿಯನ್ನು ಪ್ರೋತ್ಸಾಹಿಸುವವರಾಗಿದ್ದರೇ, ದಕ್ಷಿಣ(ಭಾರತ)ದವರ ಜತೆ ಯಾಕೆ ಇರುತ್ತಿದ್ದೆವು. ಅವರೊಂದಿಗೆ ನಾವ್ಯಾಕೆ ಜೀವಿಸುತ್ತಿದ್ದೆವು. ನಮ್ಮ ಸುತ್ತಮುತ್ತ ಕರಿಯರೇ ಇದ್ದಾರೆ ಎಂದು ಹೇಳಿ ತರುಣ್ ವಿಜಯ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದಕ್ಕೆ ಸಾಮಾಜಿಕ ತಾಣ ಸೇರಿದಂತೆ ಇತರ ಕಡೆಗಳಿಂದ ತೀವ್ರ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ನ ವಾರ ಪತ್ರಿಕೆ(ಪಾಂಚಜನ್ಯ)ಯ ಮಾಜಿ ಸಂಪಾದಕ ತರುಣ್ ವಿಜಯ್ ಟ್ವಿಟರ್‌ನಲ್ಲಿ ಕ್ಷಮೆ ಕೋರಿದ್ದರು.