ಜೂನ್ ಹಾಗೂ ಜುಲೈನಲ್ಲಿ ಒಟ್ಟು 3 ಕೋಟಿ ಪಾನ್ ನಂಬರ್'ಗಳು ಆಧಾರ್ ಜೊತೆ ಜೋಡಿಸಲ್ಪಟ್ಟಿವೆ.

ನವದೆಹಲಿ(ಆ.14): ಆಧಾರ್ ನಂಬರ್ ಜತೆ 9.3 ಕೋಟಿಗೂ ಅಧಿಕ ಪಾನ್(ಪರ್ಮನೆಂಟ್ ಅಕೌಂಟ್ ನಂಬರ್) ಸಂಯೋಜನೆಗೊಂಡಿದೆ.

ಸುಮಾರು 30 ಕೋಟಿ ಪಾನ್ ನಂಬರ್ ಬಳಕೆದಾರರ ಪೈಕಿ ಶೇ.30ರಷ್ಟು ಮಂದಿ ತಮ್ಮ ಪಾನ್ ನಂಬರ್ ಅನ್ನು ಆಧಾರ್ ಜೊತೆ ಜೋಡಿಸಿದ್ದಾರೆ. ಜೂನ್ ಹಾಗೂ ಜುಲೈನಲ್ಲಿ ಒಟ್ಟು 3 ಕೋಟಿ ಪಾನ್ ನಂಬರ್'ಗಳು ಆಧಾರ್ ಜೊತೆ ಜೋಡಿಸಲ್ಪಟ್ಟಿವೆ.

ಈಗ ಆಧಾರ್'ನೊಂದಿಗೆ ಪಾನ್ ನಂಬರ್ ಜೋಡಣೆಗೆ ಕಡೆಯ ದಿನಾಂಕವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಿರುವುದರಿಂದ ಎರಡು ನಂಬರ್'ಗಳ ಜೋಡಣೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.