ಸುರಕ್ಷತೆಗೆ ಸಂಬಂಧಿಸಿದಂತೆ ಎಸ್’ಬಿಐಯೇತರ ಏಟಿಎಮ್-ಜಾಲದಲ್ಲಿ ಉಂಟಾಗಿರುವ ವೈರಸ್ ಸಮಸ್ಯೆಯಿಂದಾಗಿ ಕಾರ್ಡ್’ಗಳು ಬ್ಲಾಕ್ ಆಗಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ

ಪುಣೆ (ಅ.20):ಭಾರತದ ಅತೀ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್’ನ ಸುಮಾರು 6 ಲಕ್ಷಕ್ಕಿಂತಲೂ ಹೆಚ್ಚು ಗ್ರಾಹಕರ ಡೆಬಿಟ್ ಕಾರ್ಡ್’ಗಳು ಬ್ಲಾಕ್ ಆಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುರಕ್ಷತೆಗೆ ಸಂಬಂಧಿಸಿದಂತೆ ಎಸ್’ಬಿಐಯೇತರ ಏಟಿಎಮ್-ಜಾಲದಲ್ಲಿ ಉಂಟಾಗಿರುವ ವೈರಸ್ ಸಮಸ್ಯೆಯಿಂದಾಗಿ ಕಾರ್ಡ್’ಗಳು ಬ್ಲಾಕ್ ಆಗಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಬ್ಯಾಂಕ್’ಗಳ ಏಟಿಎಮ್’ಗಳಲ್ಲಿ ಮಾತ್ರ ಬಳಸಲಾಗಿರುವ ಕಾರ್ಡ್’ಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ, ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಮೇಲ್’ವೇರ್ ಭಾದಿತ ಏಟಿಎಮ್ ಯಂತ್ರಗಳನ್ನು ಬಳಸುವುದರಿಂದ ಕಾರ್ಡ್’ಗಳಲ್ಲಿ ಸಮಸ್ಯೆವುಂಟಾಗುವುದಲ್ಲದೇ, ಗ್ರಾಹಕರ ಮಾಹಿತಿಯು ಕೂಡಾ ರಾಜಿಗೊಳಪಡುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಕಾರ್ಡ್ ಬ್ಲಾಕ್ ಆಗಿರುವ ಗ್ರಾಹಕರು ಗಾಬರಿಪಡಬೇಕಾಗಿಲ್ಲ, ಅವರಿಗೆ ಹೊಸ ಕಾರ್ಡ್’ಗಳನ್ನು ಶೀಘ್ರವಾಗಿ ಒದಗಿಸಲಾಗುವುದು, ಎಂದು ಅಧಿಕಾರಿಗಳು ಹೇಳಿದ್ದಾರೆ.