ಭಾರತೀಯರು ಗ್ರೀನ್ ಕಾರ್ಡ್ ಪಡೆಯಲು 151 ವರ್ಷ ಕಾಯಬೇಕು!

Over 4 Lakh Indians May Have To Wait 151 Years For Green Card: Report
Highlights

ಗ್ರೀನ್ ಹಾರ್ಡ್ ಬೇಕೆಂದರೆ 151 ಕಾಯಬೇಕು

ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆ

ವಾಷಿಂಗ್ಟನ್ ಕ್ಯಾಟೊ ಇನ್ಸ್ಟಿಟ್ಯೂಟ್ ನೀಡಿದ ಮಾಹಿತಿ ಏನು?

ವಾಷಿಂಗ್ಟನ್(ಜೂ.16): ಉನ್ನತ ಪದವಿಗಳನ್ನು ವ್ಯಾಸಂಗ ಮಾಡಿರುವ ಭಾರತೀಯರು ಅಮೆರಿಕದ ಗ್ರೀನ್ ಕಾರ್ಡ್ ಪಡೆಯಬೇಕೆಂದರೆ ಬರೊಬ್ಬರಿ 151 ವರ್ಷ ಕಾಯಬೇಕು. ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆ(ಯುಎಸ್ ಸಿಐಎಸ್) ಗ್ರೀನ್ ಕಾರ್ಡ್‌ಗಾಗಿ ಅರ್ಜಿದಾರ ಸಂಖ್ಯೆಯನ್ನು ಬಹಿರಂಗಗೊಳಿಸಿದ ನಂತರ, ವಾಷಿಂಗ್ಟನ್ ಕ್ಯಾಟೊ ಇನ್ಸ್ಟಿಟ್ಯೂಟ್ ಎಂಬ ಚಿಂತಕರ ಚಾವಡಿ ಈ ಬಗ್ಗೆ ಅಧ್ಯಯನ ನಡೆಸಿದೆ. ಭಾರತೀಯರು ಗ್ರೀನ್ ಕಾರ್ಡ್ ಹೊಂದಬೇಕಾದರೆ 15೦ ವರ್ಷಗಳು ಕಾಯಬೇಕಾಗುತ್ತದೆ ಎಂದು ಈ ಸಮಿತಿ ವರದಿ ನೀಡಿದೆ. 

2018 ರ ಏ.20 ರ ಪ್ರಕಾರ 632,219 ಭಾರತೀಯರು ಅವರ ಪತ್ನಿ ಹಾಗೂ ಮಕ್ಕಳು ಅಮೆರಿಕಾದಲ್ಲೇ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. 2017 ರಲ್ಲಿ ವಿತರಣೆ ಮಾಡಲಾಗಿರುವ ಗ್ರೀನ್ ಕಾರ್ಡ್ ನ ಅಂಕಿ-ಅಂಶಗಳ ಬಗ್ಗೆಯೂ ಮಾಹಿತಿ ಪಡೆದು ಅಧ್ಯಯನ ನಡೆಸಿರುವ ಕ್ಯಾಟೊ ಇನ್ಸ್ಟಿಟ್ಯೂಟ್, ಭಾರತದಿಂದ ಬರುವ ಅಸಮಾನ್ಯ ವಲಸಿಗರು (ವಿಶೇಷ ಸಾಮರ್ಥ್ಯ ಹೊಂದಿರುವವರನ್ನು ಇಬಿ-1 ವಲಸಿಗರ ಪಟ್ಟಿಗೆ ಸೇರಿಸಲಾಗುತ್ತದೆ) ಗ್ರೀನ್ ಕಾರ್ಡ್ ಪಡೆಯಲು ಕನಿಷ್ಠ 6 ವರ್ಷಗಳು ಕಾಯಬೇಕಾಗುತ್ತದೆ ಎಂದಿದೆ. 

ಈ ಶ್ರೇಣಿಯಲ್ಲಿ ಗ್ರೀನ್ ಕಾರ್ಡ್‌ಗೆ ಸುಮಾರು 34,824 ಭಾರತೀಯರು ಅರ್ಜಿ ಸಲ್ಲಿಸಿದ್ದು, ಕುಟುಂಬ ಸದಸ್ಯರೂ ಸೇರಿದಂತೆ ಒಟ್ಟಾರೆ 83,578 ಇಬಿ-3 ಕೆಟಗರಿಯಲ್ಲಿ ಗ್ರೀನ್ ಕಾರ್ಡ್ ಪಡೆಯಲು ಸುಮಾರು 1,15,273 ಜನರು ಅರ್ಜಿ ಸಲ್ಲಿಸಿದ್ದು,  17 ವರ್ಷ ಕಾಯಬೇಕಾಗುತ್ತದೆ. ಆದರೆ ಉನ್ನತ ಪದವಿ ಪಡೆದಿರುವ ಇಬಿ-2 ವರ್ಗದ ವ್ಯಾಪ್ತಿಗೆ ಬರುವವರು ಗ್ರೀನ್ ಕಾರ್ಡ್ ಪಡೆಯಲು 151 ವರ್ಷ ಕಾಯಬೇಕು ಎನ್ನುತ್ತಿದೆ ಕ್ಯಾಟೊ ಇನ್ಸ್ಟಿಟ್ಯೂಟ್. 

ಯುಎಸ್ ಸಿಐಎಸ್ ಪ್ರಕಾರ ಇಬಿ-2 ಕೆಟಗರಿಯಲ್ಲಿ ಭಾರತದ 2,16,684 ಜನರು ಪ್ರಾಥಮಿಕ ಅರ್ಜಿದಾರರಾಗಿದ್ದು, ಅವರ ಕುಟುಂಬ ಸದಸ್ಯರೂ ಸೇರಿದಂತೆ ಒಟ್ಟಾರೆ 4,33,368 ಭಾರತೀಯರಿದ್ದಾರೆ. 

loader