Asianet Suvarna News Asianet Suvarna News

ರೈಲ್ವೆ ಇಲಾಖೆಯಲ್ಲಿ 32 ಸಾವಿರ ಖಾಯಂ ಹುದ್ದೆಗಳಿಗೆ ನೇಮಕಾತಿ

ಇತ್ತೀಚೆಗಷ್ಟೇ ಭರ್ಜರಿ ನೇಮಕಾತಿಗೆ ಆದೇಶ ನೀಡಿದ್ದ  ರೈಲ್ವೆ ಇಲಾಖೆ ಇದೀಗ ಮತ್ತೊಮ್ಮೆ ಅತ್ಯಧಿಕ ಸಂಖ್ಯೆಯಲ್ಲಿ ಖಾಯಂ ಉದ್ಯೋಗಿಗಳ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿಯನ್ನು ನೀಡಿದೆ.  

Over 32000 new posts in Indian railways
Author
Bengaluru, First Published Aug 3, 2018, 4:08 PM IST

ನವದೆಹಲಿ :  ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಇಲ್ಲಿ ಭರ್ಜರಿ ಉದ್ಯೋಗದ ಬಾಗಿಲು ತೆರೆಯುತ್ತಿದೆ.  

ಕೆಲ ತಿಂಗಳ ಹಿಂದೆ 2 ಲಕ್ಷ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದ್ದ ರೈಲ್ವೆ ಇಲಾಖೆ 32 ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. 

ಈ ಬಗ್ಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸದ್ಯ ರೈಲ್ವೆ ಇಲಾಖೆಯಲ್ಲಿ 63 ಸಾವಿರ ಹುದ್ದೆಗಳು ಖಾಲಿ ಇವೆ. ಈ ಎಲ್ಲಾ ಹುದ್ದೆಗಳನ್ನೂ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಸದ್ಯ 32 ಸಾವಿರ ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

ಅಲ್ಲದೇ ಈ ವರ್ಷ ಖರ್ಚು ವೆಚ್ಚದ ಬಗ್ಗೆಯೂ ಪ್ರಸ್ತಾಪಿಸಿ 7 ಸಾವಿರ ಕೋಟಿ ಹಣವನ್ನು ರೈಲ್ವೆ ಇಲಾಖೆಗೆ ಯಂತ್ರಗಳನ್ನು ಕೊಳ್ಳಲು ವ್ಯಯ ಮಾಡಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ. 

ಅಲ್ಲದೇ ಇತ್ತೀಚಿನ ದಿನಗಳಲ್ಲಿ ರೈಲ್ವೆಯಲ್ಲಿ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಿದ್ದಾಗಿ ತಿಳಿಸಿದ್ದಾರೆ. 

Follow Us:
Download App:
  • android
  • ios