ನವದೆಹಲಿ[ಸೆ.12]: ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಹಾಗೂ ವಿವಿಧ ದೇಶಗಳ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ 2700ಕ್ಕೂ ಹೆಚ್ಚು ಉಡುಗೊರೆಗಳನ್ನು ಸೆ.14ರಿಂದ ಹರಾಜು ಮಾಡಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ತಿಳಿಸಿದ್ದಾರೆ.

ಪ್ರಧಾನಿಗೆ ನೀಡಲಾದ ಒಟ್ಟು 2772 ಉಡುಗೊರೆಗಳನ್ನು ಆನ್‌ಲೈನ್‌ ಮೂಲಕ ಹರಾಜು ಮಾಡಲಾಗುತ್ತಿದ್ದು, ಫಲಕಗಳ ಮೂಲ ಬೆಲೆ ಕನಿಷ್ಠ 200ರು. ನಿಂದ ಗರಿಷ್ಠ 2.5 ಲಕ್ಷ ರು. ವರೆಗೆ ನಿಗದಿ ಪಡಿಸಲಾಗಿದೆ.

ಇದೇ ವರ್ಷಾರಂಭದಲ್ಲಿ ಪ್ರಧಾನಿಗೆ ಬಂದಿದ್ದ 1800 ಉಡುಗೊರೆಗಳನ್ನು 15 ದಿನಗಳ ಕಾಲ ನಡೆದ ಹಾರಾಜಿನಲ್ಲಿ ಮಾರಾಟ ಮಾಡಲಾಗಿತ್ತು. ಇದರಿಂದ ಬರುವ ಆದಾಯವನ್ನು ಗಂಗಾ ಶುದ್ಧೀಕರಿಸುವ ನಮಾಮಿ ಗಂಗಾ ಯೋಜನೆಗೆ ಬಳಸಲಾಗುತ್ತದೆ ಎಂದು ಪಟೇಲ್‌ ಹೇಳಿದ್ದಾರೆ.