ಶಿಲ್ಲಾಂಗ್‌ [ನ.03]: ಮೇಘಾಲಯಕ್ಕೆ ಭೇಟಿ ನೀಡುವ ಅನ್ಯ ರಾಜ್ಯದ ಜನರು, ಇನ್ನು ಅಲ್ಲಿ 1 ದಿನಕ್ಕಿಂತ ಹೆಚ್ಚು ಕಾಲ ಇರಬೇಕು ಎಂದರೆ ನೋಂದಣಿ ಮಾಡಿಸಿಕೊಳ್ಳಬೇಕು.

ಇಂತಹ ಒಂದು ಹೊಸ ನಿಯಮಕ್ಕೆ ಮೇಘಾಲಯ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದ ಬುಡಕಟ್ಟು ಜನರ ಹಿತರಕ್ಷಣೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಜರುಗಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಮೇಘಾಲಯ ನಿವಾಸಿಗಳ ಸುರಕ್ಷತೆ ಹಾಗೂ ಭದ್ರತಾ ಕಾಯ್ದೆ-2016ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ನಿರ್ಧರಿಸಿದ್ದು, ಶೀಘ್ರ ಇದಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದೆ.

ಈ ನದಿ ಮೇಲೆ ಸಾಗಿದರೆ ಕನ್ನಡಿ ಮೇಲೆ ನಡೆದಂಥ ಅನುಭವ..

‘ಮೇಘಾಲಯದ ನಿವಾಸಿಯಾಗದೇ ಇರುವ ಹೊರರಾಜ್ಯದ ಜನರು, ರಾಜ್ಯದಲ್ಲಿ 24 ತಾಸಿಗಿಂತ ಹೆಚ್ಚು ಕಾಲ ಇರಬೇಕು ಎಂದುಕೊಂಡಿದ್ದಲ್ಲಿ, ಸರ್ಕಾರಕ್ಕೆ ಅವರು ದಾಖಲಾತಿಗಳನ್ನು ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಈ ನಿಯಮದಿಂದ ಕೇಂದ್ರ, ರಾಜ್ಯ ಹಾಗೂ ಜಿಲ್ಲಾಡಳಿತದ ನೌಕರರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಪ್ರೀಸ್ಟೋನ್‌ ಟೈನ್ಸಾಂಗ್‌ ಹೇಳಿದರು.