Asianet Suvarna News Asianet Suvarna News

ಈ ಗ್ರಾಮದ ಹೆಣ್ಮಕ್ಕಳೊಂದಿಗೆ ಮದುವೆಯಾಗಲು ಯಾರೂ ತಯಾರಿಲ್ವಂತೆ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ವಿಷಕಾರಿ ಅರ್ಸೆನಿಕ್ ಅಂಶದ ನೀರಿದ್ದು, ಅನೇಕ ವರ್ಷಗಳಿಂದ ಅದೇ ನೀರನ್ನು ಕುಡಿದು ಚರ್ಮರೋಗ, ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾರೆ. ಇದರಿಂದ ಕೊನೆಗೂ ಎಚ್ಚೆತ್ತ ಸರ್ಕಾರ, 2013ರಲ್ಲಿ ಅರ್ಸೆನಿಕ್ ಮುಕ್ತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಆದರೆ ಶುದ್ಧೀಕರಣ ಘಟಕದ ನೀರನ್ನೇ ಕುಡಿದರೂ ಇಲ್ಲಿನ ನಿವಾಸಿಗಳು ಖಾಯಿಲೆಗಳಿಂದ ಮುಕ್ತಿ ಪಡೆದಿಲ್ಲ. ಹೀಗಾಗಿ ಇಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾಗಲು ಯಾರು ಬರುತ್ತಿಲ್ಲವಂತೆ.

Outside People Are Not Ready To Marry Girls From This Village

ಯಾದಗಿರಿ(ನ.22):ಆ ಗ್ರಾಮದಲ್ಲಿ ಹೆಣ್ಣು ಮಕ್ಕಳು ಇದ್ದಾರೆ, ಅನೇಕರು ಮದುವೆ ವಯಸ್ಸಿಗೆ ಬಂದಿದ್ದಾರೆ. ಆದರೆ ಯಾರು ಅವರನ್ನುನ್ನು ಮದುವೆಯಾಗಲು ಹೊರ ಊರುಗಳಿಂದ ಬರುತ್ತಿಲ್ಲ. ಆ ಊರಿಗೆ ಏನಾಗಿದೆ? ಇಲ್ಲಿದೆ ಉತ್ತರ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ವಿಷಕಾರಿ ಅರ್ಸೆನಿಕ್ ಅಂಶದ ನೀರಿದ್ದು, ಅನೇಕ ವರ್ಷಗಳಿಂದ ಅದೇ ನೀರನ್ನು ಕುಡಿದು ಚರ್ಮರೋಗ, ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾರೆ. ಇದರಿಂದ ಕೊನೆಗೂ ಎಚ್ಚೆತ್ತ ಸರ್ಕಾರ, 2013ರಲ್ಲಿ ಅರ್ಸೆನಿಕ್ ಮುಕ್ತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಆದರೆ ಶುದ್ಧೀಕರಣ ಘಟಕದ ನೀರನ್ನೇ ಕುಡಿದರೂ ಇಲ್ಲಿನ ನಿವಾಸಿಗಳು ಖಾಯಿಲೆಗಳಿಂದ ಮುಕ್ತಿ ಪಡೆದಿಲ್ಲ. ಹೀಗಾಗಿ ಇಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾಗಲು ಯಾರು ಬರುತ್ತಿಲ್ಲವಂತೆ.

ಶುದ್ಧೀಕರಣ ಘಟಕದ ನೀರು ಕುಡಿದರೂ  ಕಾಯಿಲೆ ಉಲ್ಬಣಿಸುತ್ತಿರುವುದರಿಂದ ತಾಂಡಾ ನಿವಾಸಿಗಳು ಮತ್ತಷ್ಟು ಭಯಭೀತರಾಗಿದ್ದಾರೆ. ಕ್ಯಾನ್ಸರ್​'ನಿಂದ 26 ಮಂದಿ ಸಾವನ್ನಪ್ಪಿದ್ದರೆ, 48 ಮಂದಿ ಚರ್ಮದ ಖಾಯಿಲೆಗೆ ತುತ್ತಾಗಿದ್ದಾರಂತೆ. ವೈದ್ಯಾಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ಔಷಧಿ ನೀಡುತ್ತಿದ್ದರೂ ರೋಗಿಗಳ ಸಂಖ್ಯೆ ಇಳಿಮುಖವಾಗಿಲ್ಲ. ಹೀಗಾಗಿ  ಗ್ರಾಮವನ್ನೇ  ಸ್ಥಳಾಂತರ ಮಾಡುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಾಲೂ ವೈದ್ಯಾಧಿಕಾರಿಗಳು ಪತ್ರ ಬರೆದಿದ್ದಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲ ತಾಂಡಾವನ್ನೇ ಸ್ಥಳಾಂತರಿಸಬೇಕಾಗಿದೆ.

Follow Us:
Download App:
  • android
  • ios