ಫೋಟೋಗೆ ಚೆನ್ನಾಗಿ ಪೋಸ್‌ ಕೊಡಬೇಕು ಅಂತ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಇದೀಗ ಉತ್ತಮ ಕ್ಯಾಮೆರಾ ಪಿಕ್ಸಲ್‌ ಫೋನ್‌ಗಳು ಬಂದಾಗಿನಿಂದಂತೂ ಸೆಲ್ಫಿ ಹುಚ್ಚು ಹಿಡಿದಿದೆ. ಸ್ನೇಹಿತರ ಜೊತೆ ಪಾರ್ಟಿ ಮಾಡಿದರೂ ಸೆಲ್ಫಿ. ಯಾವುದೇ ಕಾರ್ಯಕ್ರಮ ಹಾಗೂ ಕುಟುಂಬಸ್ಥರ ಜೊತೆ ವಿಶೇಷ ಸ್ಥಳಕ್ಕೆ ತೆರಳಿದರೂ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ತಾರೆ.

ಆದರೆ, ಮೂಕ ಪ್ರಾಣಿಗಳು ಸೆಲ್ಫೀಗೆ ಪೋಸ್‌ ನೀಡಲು ನೋಡಿರಲು ಸಾಧ್ಯವೇ? ಕಾಂಗೋ ಡೆಮಾಕ್ರಟಿಕ್‌ ರಿಪಬ್ಲಿಕ್‌ನ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಜೊತೆ ಎರಡು ಗೊರಿಲ್ಲಾಗಳು ಪೋಸ್‌ ನೀಡಿವೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ.

ಕೆಲವರಂತೂ ಇದು ಈ ವರ್ಷದ ಬೆಸ್ಟ್ ಫೋಟೋ ಎಂದೂ ವರ್ಣಿಸಿದ್ದಾರೆ.