ನಿವೃತ್ತ ಯೋಧ ರಾಮ್ ಕಿಶನ್ ಮೊನ್ನೆ ದೆಹಲಿಯ ಜಂತರ್ ಮಂತರ್’ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷ ಸೇವನೆಯಿಂದಲೇ ರಾಮ್ ಕಿಶನ್ ಸಾವನಪ್ಪಿದ್ದಾರೆ ಎಂದು ಮರಣೋತ್ತರ ವರದಿ ಧೃಡಪಡಿಸಿದೆ.

ನವದೆಹಲಿ (ನ.03): ಸಮಾನ ಹುದ್ದೆ-ಸಮಾನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ವಿಳಂಬದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಅಂತ್ಯಕ್ರಿಯೆ ಇಂದು ಹರ್ಯಾಣದ ಭಿವಾನಿಯಲ್ಲಿ ನಡೆಯಿತು.

ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭೂಪಿಂದರ್ ಸಿಂಗ ಹೂಡಾ ಹಾಗೂ ಕಮಲ್ ನಾಥ್ ಮುಂತಾದ ರಾಜಕೀಯ ನಾಯಕರು ಕೂಡಾ ಭಾಗವಹಿಸಿದ್ದರು.

ನಿವೃತ್ತ ಯೋಧ ರಾಮ್ ಕಿಶನ್ ಮೊನ್ನೆ ದೆಹಲಿಯ ಜಂತರ್ ಮಂತರ್’ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷ ಸೇವನೆಯಿಂದಲೇ ರಾಮ್ ಕಿಶನ್ ಸಾವನಪ್ಪಿದ್ದಾರೆ ಎಂದು ಮರಣೋತ್ತರ ವರದಿ ಧೃಡಪಡಿಸಿದೆ.

ಮೃತ ಯೋಧನ ಕುಟುಂಬಸ್ಥರು ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಗ್ರೆವಾಲ್, ಸಮಾನ ಪಿಂಚಣಿ ವಿಚಾರದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್’ಗೆ ಪತ್ರ ಬರೆದಿದ್ದರು.