Asianet Suvarna News Asianet Suvarna News

ಸುಷ್ಮಾ ಸ್ವರಾಜ್‌ಗೆ ಇಸ್ಲಾಮಿಕ್ ಸಹಕಾರ ಸಂಘಟನೆ ಆಹ್ವಾನ!

ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ವಿದೇಶಾಂಗ ಸಚಿವರ ಸಭೆ| ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವರಿಗೆ ಗೌರವ ಅತಿಥಿಯಾಗಿ ಭಾಗವಹಿಸಲು ಆಹ್ವಾನ| ಮಾ.1 ರಂದು  ಅಬುಧಾಬಿಯಲ್ಲಿ ನಡೆಯಲಿರುವ ಒಐಸಿಯ 46 ನೇ ಶೃಂಗಸಭೆ| ಉದ್ಘಾಟನಾ ಭಾಷಣ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ| ಒಐಸಿ ಮನವಿ ಪುರಸ್ಕರಿಸಿರುವ ವಿದೇಶಾಂಗ ಇಲಾಖೆ|  

Organisation of Islamic Cooperation Invited Sushma Swaraj To Attend Summit
Author
Bengaluru, First Published Feb 23, 2019, 7:17 PM IST

ಅಬುದಾಬಿ(ಫೆ.23): ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ವಿದೇಶಾಂಗ ಸಚಿವರ ಸಭೆಗೆ ಇದೇ ಮೊದಲ ಬಾರಿಗೆ, ಭಾರತದ ವಿದೇಶಾಂಗ ಸಚಿವರಿಗೆ ಗೌರವ ಅತಿಥಿಯಾಗಿ ಭಾಗವಹಿಸಲು ಆಹ್ವಾನ ನೀಡಿದೆ. 

ಮಾ.1 ರಂದು  ಅಬುಧಾಬಿಯಲ್ಲಿ ನಡೆಯಲಿರುವ ಒಐಸಿಯ 46 ನೇ ಶೃಂಗಸಭೆಯ ಉದ್ಘಾಟನಾ ಭಾಷಣ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಯೀದ್ ಅಲ್ ನಹ್ಯಾನ್, ಸಮಾರಂಭದ ಉದ್ಘಾಟನಾ ಭಾಷಣ ಮಾಡುವಂತೆ ಭಾರತದ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಒಐಸಿ ಮನವಿಯನ್ನು ವಿನಮ್ರತೆಯಿಂದ ಸ್ವೀಕರಿಸಿರುವ ಭಾರತದ ವಿದೇಶಾಂಗ ಇಲಾಖೆ,  ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ-ಆಪರೇಷನ್ ನ ಆಹ್ವಾನವನ್ನು ಭಾರತದಲ್ಲಿರುವ 185 ಮಿಲಿಯನ್ ಮುಸ್ಲಿಮರ ಹಾಗೂ ಇಸ್ಲಾಮಿಕ್ ಜಗತ್ತಿಗೆ ಭಾರತದ ಕೊಡುಗೆಯ  ಸ್ವಾಗತಾರ್ಹ ಗುರುತಿಸುವಿಕೆಯೆಂದು ಪರಿಗಣಿಸುವುದಾಗಿ ತಿಳಿಸಿದೆ.

1969 ರಲ್ಲಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ ಸಂಘಟನೆ ಆರಂಭವಾಗಿದ್ದು, 57 ಇಸ್ಲಾಮಿಕ್ ರಾಷ್ಟ್ರಗಳು ಇದರಲ್ಲಿ ಸದಸ್ಯತ್ವ ಪಡೆದಿವೆ. 

Follow Us:
Download App:
  • android
  • ios