ರಾಜ್ಯದ ಪೊಲೀಸ್ ಇಲಾಖೆಯಲ್ಲಿರುವ ಆರ್ಡರ್ಲಿ ವ್ಯವಸ್ಥೆ ರದ್ದುಗೊಳಿಸುವಂತೆ ಸರ್ಕಾರ ಈಗಾಗಲೇ ಆದೇಶ ಮಾಡಿದ್ದು, ಇದು ಸದ್ಯದಲ್ಲೇ ಅನುಷ್ಠಾನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆ: ರಾಜ್ಯದ ಪೊಲೀಸ್ ಇಲಾಖೆಯಲ್ಲಿರುವ ಆರ್ಡರ್ಲಿ ವ್ಯವಸ್ಥೆ ರದ್ದುಗೊಳಿಸುವಂತೆ ಸರ್ಕಾರ ಈಗಾಗಲೇ ಆದೇಶ ಮಾಡಿದ್ದು, ಇದು ಸದ್ಯದಲ್ಲೇ ಅನುಷ್ಠಾನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಇಲಾಖೆ ಕೆಲಸ ಬಿಟ್ಟು ಹಿರಿಯ ಅಧಿಕಾರಿಗಳ ಸೇವೆಗೆ ನಿಯೋಜನೆಯಾಗುತ್ತಿರುವ ಆರ್ಡರ್ಲಿ ಪದ್ಧತಿ ರದ್ದುಗೊಳಿಸುವುದಾಗಿ ಸರ್ಕಾರ ಹೇಳಿತ್ತು. ಆದರೂ ಆರ್ಡರ್ಲಿ ಪದ್ಧತಿ ಇನ್ನೂ ನಡೆಯುತ್ತಿದೆ ಎಂದು ‘ಕನ್ನಡಪ್ರಭ’ ಮಂಗಳವಾರ ವಿಶೇಷ ವರದಿ ಪ್ರಕಟಿಸಿತ್ತು.
ಈ ಬಗ್ಗೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪರಮೇಶ್ವರ್ ಗೃಹ ಸಚಿವರಾಗಿದ್ದಾಗ ನೀಡಿದ್ದ ಬಹುತೇಕ ಭರವಸೆಗಳು ಇನ್ನೂ ಈಡೇರಿಲ್ಲ. ಅದರಲ್ಲೂ ಆರ್ಡರ್ಲಿ ಪದ್ಧತಿ ಇನ್ನೂ ಹೋಗಿಲ್ಲ ಎಂದು ಗಮನ ಸೆಳೆದರು. ಆಗ ಗೃಹ ಸಚಿವರ ಪರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ಪೊಲೀಸ್ ಸಿಬ್ಬಂದಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಸೌಲಭ್ಯ ನೀಡಿದೆ. ತಿಂಗಳಿಗೆ 2100 ರು. ವೇತನ ಹೆಚ್ಚು ಮಾಡಲಾಗಿದೆ. ನಿರೀಕ್ಷಿತ ಆರ್ಡರ್ಲಿ ಪದ್ಧತಿ ರದ್ದುಗೊಳಿಸುವಂತೆ ಆದೇಶ ಮಾಡಲಾಗಿದೆ. ಅದನ್ನು ಸದ್ಯದಲ್ಲೇ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
