ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಪೇದೆಗಳನ್ನು ಜೀತದಾಳುಗಳ ರೀತಿ ಮನೆಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಸುವರ್ಣನ್ಯೂಸ್​ ವರದಿ ಮಾಡಿತ್ತು. ಆರ್ಡರ್ಲಿ ಪದ್ದತಿಯನ್ನು ರದ್ದುಗೊಳಿಸಿದ್ದರೂ ನಿಯಮ ಉಲ್ಲಂಘಿಸಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿತ್ತು.

ಬೆಂಗಳೂರು(ಜೂ.27): ಕಾನೂನು ಬಾಹಿರವಾಗಿ ಆರ್ಡರ್ಲಿಗಳನ್ನು ನೇಮಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ದೂರು ಸಲ್ಲಿಕೆಯಾಗಿದೆ. ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ವಕೀಲರಾದ ಸುಧಾ ಕಟವಾ, ವಕೀಲ ಉಮಾಪತಿ ಕಂಪ್ಲೇಂಟ್​ ನೀಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಪೇದೆಗಳನ್ನು ಜೀತದಾಳುಗಳ ರೀತಿ ಮನೆಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಸುವರ್ಣನ್ಯೂಸ್​ ವರದಿ ಮಾಡಿತ್ತು. ಆರ್ಡರ್ಲಿ ಪದ್ದತಿಯನ್ನು ರದ್ದುಗೊಳಿಸಿದ್ದರೂ ನಿಯಮ ಉಲ್ಲಂಘಿಸಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿತ್ತು. ಇದೇ ಆಧಾರದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಎಡಿಜಿಪಿ, ಐಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. 51 ಐಪಿಎಸ್ ಅಧಿಕಾರಿಗಳು ಸೇರಿ 81 ಅಧಿಕಾರಿಗಳು ಆರ್ಡಲಿಗಳ ನೇಮಕ ಮಾಡಿಕೊಂಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿಗಷ್ಟೆ ಆರ್ಡರ್ಲಿ ವ್ಯವಸ್ಥೆಯನ್ನು ರದ್ದಿಗೊಳಿಸಿದ್ದ ಸರ್ಕಾರ ಸಿಬ್ಬಂದಿಯ ಸ್ಥಳದಲ್ಲಿ ಖಾಸಗಿ ಅನುಯಾಯಿಗಳನ್ನು ನೇಮಿಸಿಕೊಳ್ಳುವಂತೆ ನಿರ್ದೇಶಿಸಿತ್ತು. ಜೊತೆಗೆ ಭತ್ಯೆ ರೂಪದಲ್ಲಿ ಹಣ ಪಾವತಿ ಮಾಡುವುದಾಗಿ ಗೃಹ ಇಲಾಖೆ ಕೂಡ ಆದೇಶ ಹೊರಡಿಸಿತ್ತು. ನಿಷೇಧ ಮಾಡುವ ಮೊದಲು ಬೆಂಗಳೂರೊಂದರಲ್ಲೇ ವಿವಿಧ ದರ್ಜೆ ಅಧಿಕಾರಿಗಳ ಮನೆಗಳಲ್ಲಿ 1239 ಮಂದಿ ಸಿಎಆರ್ ಸಿಬ್ಬಂದಿ ಆರ್ಡರ್ಲಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು.