ವೇಮುಲ ತಾಯಿಗೆ ರಾಹುಲ್ ಆಮಿಷ..?

First Published 21, Jun 2018, 11:50 AM IST
Opposition used Rohith Vemula's mother for political gain says BJP
Highlights

ಎರಡು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ತಾಯಿ ಜತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ಹಿಂದೆ ವೇದಿಕೆ ಹಂಚಿಕೊಂಡಿದ್ದರು. ಹೀಗಾಗಿ ವೇಮುಲ ತಾಯಿಗೆ ರಾಹುಲ್ ಯಾವ ರೀತಿಯ ಆಮಿಷ ಒಡ್ಡಿದ್ದಾರೆ ಎಂಬುದು ಪತ್ತೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ನವದೆಹಲಿ: ಎರಡು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ತಾಯಿ ಜತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ಹಿಂದೆ ವೇದಿಕೆ ಹಂಚಿಕೊಂಡಿದ್ದರು. ಹೀಗಾಗಿ ವೇಮುಲ ತಾಯಿಗೆ ರಾಹುಲ್ ಯಾವ ರೀತಿಯ ಆಮಿಷ ಒಡ್ಡಿದ್ದಾರೆ ಎಂಬುದು ಪತ್ತೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇದೇ ವೇಳೆ ಕೀಳು ರಾಜಕೀಯ ಲಾಭಕ್ಕಾಗಿ ವೇಮುಲಾ ಅವರ ತಾಯಿಯ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸಲಾಗಿದೆ. ಈ ಸಂಬಂಧ ರಾಹುಲ್ ಅವರು ಕ್ಷಮೆ ಯಾಚಿಸಬೇಕೂ ಎಂದು ಒತ್ತಾಯಿಸಿದೆ. ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ರಾಜಕೀಯ ರ‌್ಯಾಲಿಗಳಿಗೆ ಹಾಜರಾದರೆ 20  ಲಕ್ಷ ರು. ನೀಡುವುದಾಗಿ ವೇಮುಲ ಅವರ ತಾಯಿಗೆ ಕೇರಳ ಮೂಲದ ಇಂಡಿಯನ್
ಯೂನಿಯನ್ ಮುಸ್ಲಿಂ ಲೀಗ್ ಭರವಸೆ ನೀಡಿತ್ತು. 

ಆದರೆ ಈಗ ಹಣ ನೀಡದೆ ವಂಚಿಸಿದೆ. ಆಕೆಗೆ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಸಚಿವ ಪೀಯೂಷ್ ಗೋಯಲ್ ಈ ಒತ್ತಾಯ ಮಾಡಿದ್ದಾರೆ.

loader