ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆದಿದ್ದು ಸಂಬಂಧಪಟ್ಟ ಇಲಾಖೆಗೆ ವಹಿಸಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸೀತರಾಮ್ ಹೇಳಿದ್ದಾರೆ

ಚಿಕ್ಕಮಗಳೂರು (ಅ.24): ಹಿಂದೂ ಪರ ಸಂಘಟನೆಗಳು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎಮ್.ಆರ್. ಸೀತಾರಾಮ್ ಹೇಳಿದ್ದಾರೆ.

ಟಿಪ್ಪು ಜಯಂತಿಗೆ ವಿರೋಧಿಸುತ್ತಿರುವುದಕ್ಕೆ ಸರ್ಕಾರ ಉದ್ರೇಕಕ್ಕೆ ಒಳಗಾಗಬಾರದು. ಸರ್ಕಾರ ತಪ್ಪು ಮಾಡಿ ಸಿಲುಕಿಕೊಳ್ಳಲಿ ಎಂದು ಕೆಲವರು ಕಾಯ್ತಿದ್ದಾರೆ. ಅದಕ್ಕೆ ಸರ್ಕಾರವಾಗಲಿ, ನಾಯಕರಾಗಲಿ ಅವಕಾಶ ಕೊಡಲ್ಲ. ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆದಿದ್ದು ಸಂಬಂಧಪಟ್ಟ ಇಲಾಖೆಗೆ ವಹಿಸಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸೀತರಾಮ್ ಹೇಳಿದ್ದಾರೆ.