ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಚಿನ್ನದ ಪದಕ ಬರುತ್ತದೆ ಎಂಬುದು ಈವರೆಗಿನ ನಿಯಮವಾಗಿತ್ತು. ಆದರೆ ಪುಣೆ ವಿಶ್ವವಿದ್ಯಾಲಯವು ಇದಕ್ಕೆ ಭಿನ್ನ.

ಪುಣೆ: ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಚಿನ್ನದ ಪದಕ ಬರುತ್ತದೆ ಎಂಬುದು ಈವರೆಗಿನ ನಿಯಮವಾಗಿತ್ತು. ಆದರೆ ಪುಣೆ ವಿಶ್ವವಿದ್ಯಾಲಯವು ಇದಕ್ಕೆ ಭಿನ್ನ.

ಹೆಚ್ಚಿನ ಅಂಕ ಪಡೆಯುವುದಷ್ಟೇ ಅಲ್ಲ, ಆ ವಿದ್ಯಾರ್ಥಿ ಕುಡುಕನಾಗಿರಬಾರದು ಹಾಗೂ ಸಸ್ಯಾಹಾರಿಯಾಗಿರ ಬೇಕು ಎಂಬ ನಿಯಮವನ್ನು ಜಾರಿಗೆ ತಂದಿದೆ. ‘ಶೇಲಾರ್ ಮಾಮಾ’ ಎಂಬುವರ ಹೆಸರಿನಲ್ಲಿ ಚಿನ್ನದ ಪದಕವೊಂದಿದ್ದು, ಆ ಪದಕ ಪಡೆಯಲು ಈ ಷರತ್ತುಗಳು ಅನ್ವಯವಾಗುತ್ತವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವಿವಿ ಘೋಷಣೆ ಹೊರಬೀಳುತ್ತಿದ್ದಂತೆಯೇ ಇದಕ್ಕೆ ವ್ಯಾಪಕ ಆಕ್ಷೇಪ, ಆಕ್ರೋಶಗಳು ವ್ಯಕ್ತವಾಗಿವೆ. ಎನ್’ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ನಿಯಮವನ್ನು ತೀವ್ರವಾಗಿ ವಿರೋಧಿಸಿದ್ದು, ‘ಇಂಥ ನಿರ್ಧಾರ ನನಗೆ ಆಘಾತ ತಂದಿದೆ. ಚಿನ್ನದ ಪದಕ ಸಿಗೋದು ಮೆರಿಟ್ ಮೇಲಲ್ಲವೇ? ಶಿಕ್ಷಣದ ಗುಣಮಟ್ಟದ ಬಗ್ಗೆ ಗಮನ ಹರಿಸೋದು ಬಿಟ್ಟು ಈ ರೀತಿ ಜನರನ್ನು ವಿಭಜಿಸುವುದು ಸರಿಯೇ?’ ಎಂದು ಪ್ರಶ್ನಿಸಿದ್ದಾರೆ.