ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಚುನಾವಣಾ ಇತಿಹಾಸದಲ್ಲಿ ನಿಮಗೆ ತಿಳಿಯದ ಕೆಲ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ

ದಕ್ಷಿಣ ಭಾರತದಿಂದ ಪ್ರಧಾನಿಯಾದವರು ಇಬ್ಬರೇ

ಪ್ರಧಾನಿ ಪಟ್ಟ ಅಲಂಕರಿಸಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಪಿ.ವಿ. ನರಸಿಂಹರಾವ್. ಆಂಧ್ರಪ್ರದೇಶದ ಅವರು 1991 ರಿಂದ 1996 ರವರೆಗೆ ಪ್ರಧಾನಿಯಾಗಿದ್ದರು. ಎರಡನೇ ವ್ಯಕ್ತಿ ಎಚ್.ಡಿ. ದೇವೇಗೌಡ. 1996 ರಿಂದ 1997 ರವರೆಗೆ ಗದ್ದುಗೆಯಲ್ಲಿದ್ದರು. ಆನಂತರ ಮತ್ಯಾರಿಗೂ ಅವಕಾಶ ಲಭಿಸಿಲ್ಲ.

ಅಖಾಡಕ್ಕಿಳಿದ ರಾಜ್ಯದ ಮೊದಲ ಕವಿ ದಿನಕರ ದೇಸಾಯಿ

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ರಾಜ್ಯದ ಮೊದಲ ಕವಿ ದಿನಕರ ದೇಸಾಯಿ (ಡಿ.ಡಿ. ದತ್ತಾತ್ರೇಯ). ‘ಚುಟುಕು ಬ್ರಹ್ಮ’ ಎಂದೇ ಹೆಸರುವಾಸಿಯಾಗಿದ್ದ ಅವರು 1967 ರ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಮಣಿಸಿದ್ದರು.

ನಾಮನಿರ್ದೇಶಿತ ಸದಸ್ಯರನ್ನೂ ಒಳಗೊಂಡಂತೆ ಲೋಕಸಭೆಯ ಬಲ 545.  2004 ರ ಲೋಕಸಭೆ ಚುನಾವಣೆಯಲ್ಲಿ 313 ಮಂದಿ ಅದೇ ಮೊದಲ ಬಾರಿಗೆ 313 ಲೋಕಸಭೆ ಪ್ರವೇಶಿಸಿದ್ದರು. ಇದು 3 ದಶಕಗಳಲ್ಲೇ ದಾಖಲೆ.